Advertisement

ಪೂರ್ವ ಮುಂಗಾರು ಗಾಳಿ-ಮಳೆ; ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ

12:41 AM Jun 02, 2024 | Team Udayavani |

ಮಂಗಳೂರು: ಪೂರ್ವ ಮುಂಗಾರು ಗಾಳಿ ಮಳೆಗೆ ವಿದ್ಯುತ್‌ ಕಂಬಗಳು ಪರಿವರ್ತಕಗಳು ಸೇರಿದಂತೆ 9.63 ಕೋ.ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ.

Advertisement

ಮೆಸ್ಕಾಂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದ್ದು 2024ರ ಎ.1 ರಿಂದ ಮೇ 31ರ ವರೆಗಿನ ಅವ ಧಿಯಲ್ಲಿ ಗಾಳಿ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 353.01 ಲಕ್ಷ ರೂ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 241.72 ಲಕ್ಷ ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 200.79 ಲಕ್ಷ ರೂ. ಮತ್ತು ಶಿವಮೊಗ್ಗದಲ್ಲಿ 167.70 ಲಕ್ಷ ರೂ. ಮೊತ್ತದ ಮೆಸ್ಕಾಂ ಅಸ್ತಿಗಳು ಹಾನಿಗೊಂಡಿವೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಿರುವ ಹಾನಿಗಳನ್ನು ಸರಿಪಡಿಸಿ ವಿದ್ಯುತ್‌ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯವನ್ನು ಮೆಸ್ಕಾಂ ಮಾಡುತ್ತದೆ.

5,883 ಕಂಬಗಳು ಧರಾಶಾಯಿ
ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಗಾಳಿ ಮಳೆಗೆ ಒಟ್ಟು 5883 ವಿದ್ಯುತ್‌ ಕಂಬಗಳು ಹಾನಿಗೊಂಡಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಿನ 2066 ಕಂಬಗಳಿಗೆ ಹಾನಿಯಾಗಿದೆ. ಶಿವಮೊಗ್ಗದಲ್ಲಿ 1564, ದಕ್ಷಿಣ ಕನ್ನಡದಲ್ಲಿ 1306, ಉಡುಪಿ ಜಿಲ್ಲೆಯಲ್ಲಿ 947 ಕಂಬಗಳಿಗೆ ಹಾನಿಯಾಗಿದೆ. ಹಾನಿಗೊಂಡಿರುವ ವಿದ್ಯುತ್‌ ಕಂಬಗಳನ್ನು ಬದಲಾಯಿಸಲಾಗಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 165 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿವೆ. ದಕ್ಷಿಣ ಕನ್ನಡದಲ್ಲಿ 26, ಉಡುಪಿ ಜಿಲ್ಲೆಯಲ್ಲಿ 20, ಶಿವಮೊಗ್ಗದಲ್ಲಿ 119 ವಿದ್ಯುತ್‌ ಪರಿವರ್ತಕಗಳು ಹಾನಿಗೊಂಡಿವೆ. ವಿದ್ಯುತ್‌ ಪರಿವರ್ತಕಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಹಾನಿ ಸಂಭವಿಸಿದೆ. ಹಾನಿಗೊಂಡಿರುವ ಪರಿವರ್ತಕಗಳನ್ನು ದುರಸ್ತಿ ಹಾಗೂ ಬದಲಾವಣೆ ಮಾಡಲಾಗಿದೆ.

Advertisement

ಮುಂಗಾರು ಗಾಳಿ, ಮಳೆಗೆ 157.72 ಕಿ.ಮೀ. ವಿದ್ಯುತ್‌ ಮಾರ್ಗಗಳು ಹಾನಿಗೊಂ ಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65.30 ಕಿ.ಮೀ. ವಿದ್ಯುತ್‌ ಮಾರ್ಗ ಹಾನಿಗೊಂಡಿದ್ದು ಉಡುಪಿ ಜಿಲ್ಲೆಯಲ್ಲಿ 18.56 ಕಿ.ಮೀ. ವಿದ್ಯುತ್‌ ಮಾರ್ಗ ಹಾನಿಗೊಳಗಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 41.32 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 31.54 ಕಿ.ಮೀ. ವಿದ್ಯುತ್‌ ಮಾರ್ಗ ಹಾನಿಗೊಂಡಿದ್ದು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next