Advertisement
ಬಹುತೇಕ ಬಯಲುಸೀಮೆ ಪ್ರದೇಶವಾಗಿರುವ ತುಮಕೂರು ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲ ರೈತರಿಗಿಲ್ಲ, ತೋಟ ಗಾರಿಕೆ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ. ಪೂರ್ವ ಮುಂಗಾರು ಮಳೆಯಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ, ಭಾಗಗಳಲ್ಲಿ ಹೆಸರು, ಉದ್ದು, ಅಲಸಂದಿ, ಬೆಳೆ ಬೆಳೆದು ತಮ್ಮ ಆರ್ಥಿಕತೆಯನ್ನು ಅಬಿವೃದ್ಧಿ ಪಡಿಸಿಕೊಳ್ಳುತ್ತಿದ್ದರು. ಮುಂಗಾರು ಮಳೆ ಆರಂಭವಾಗುವ ವೇಳೆಗೆ ಈ ಬೆಳೆಯನ್ನು ಕಟಾವು ಮಾಡಿ ಮುಂದೆ ಮತ್ತೆ ರಾಗಿ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರನ್ನು ಆಂತಕಕ್ಕೀಡುಮಾಡಿದೆ.
Related Articles
Advertisement
ಕಳೆದ ವರ್ಷ 22.06 ಮಿ.ಮೀ. ಮಳೆ ಬಂದಿದೆ. ಆದರೆ ಈ ವರ್ಷ ಇಲ್ಲಿಯ ವರೆಗೆ 34.36 ಮಿ.ಮೀ.ಬಿದ್ದಿದ್ದು, ಹೆಸರು, ಉದ್ದು, ಅಲಸಂದಿ ಬೆಳೆಯುವ ಚಿಕ್ಕನಾಯಕನಹಳ್ಳಿಯಲ್ಲಿ ಕೇವಲ 9.05 ಮಿ.ಮೀ ತುರುವೇಕೆರೆಯಲ್ಲಿ 19,08 ಮಿ.ಮೀ. ಮಾತ್ರ ಮಳೆ ಬಿದ್ದಿದ್ದು, ಅತಿ ಕಡಿಮೆ ಮಳೆ ಬಿದ್ದಿದೆ. ಜಿಲ್ಲೆಯ ಪಾವಗಡ, ತಿಪಟೂರು, ಸಿರಾ, ಸೇರಿದಂತೆ ವಿವಿಧ ತಾಲೂಕುಗಳಲ್ಲಿಯೂ ಮಳೆ ಕಡಿಮೆಯಾಗಿದೆ.
ಮುಂಗಾರು ವಿಳಂಬ: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದರೂ ಮುಂದೆ ಮಳೆ ಬರುತ್ತದೆ ಬಿತ್ತನೆ ಮಾಡಬಹುದು ಎಂದು ಏಪ್ರಿಲ್ ಮೇ ತಿಂಗಳಲ್ಲಿ ರೈತರು ತಮ್ಮ ಭೂಮಿ ಹಸನು ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದರು.
ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ಕುಣಿಗಲ್ ತಾಲೂಕು ಸೇರಿದಂತೆ ಇತರೆ ಕಡೆಗಳಲ್ಲಿ ರೈತರ ಆರ್ಥಿಕ ಅಬಿವೃದ್ಧಿಯ ಬೆಳೆಯಾದ ಹೆಸರುಕಾಳು ಬೆಳೆ ಉತ್ತಮ ವಾಗಿ ಬರುತ್ತದೆ ಎಂದು ನಿರೀಕ್ಷಿಸಿ, ಕೆಲವು ರೈತರು ಸಾಲ, ಸೋಲ ಮಾಡಿ ಬಿತ್ತನೆ ಮಾಡಿದ್ದರು ಈಗ ಕಾಳು ಗಳು ಮಳೆ ಬಾರದೆ ಮೊಳಕೆಯೊಡುವ ಹಂತದಲ್ಲಿಯೇ ಒಣಗಿದೆ. ಮುಂಗಾರು ಮಳೆ ವಿಳಂಬದಿಂದಾಗಿ ಹಾಕಿದ್ದ ಬೆಳೆಗಳು ಒಣಗಿ ರೈತ ಸಮೂಹಕ್ಕೆ ಅಪಾರ ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳು: ಜಿಲ್ಲೆಯಲ್ಲಿ ಪ್ರಮುಖವಾಗಿ ರಾಗಿ, ಶೇಂಗಾ ಪ್ರಮುಖ ಬೆಳೆ ಯಾಗಿದೆ. ಉಳಿದಂತೆ ಹೆಸರು, ಅಲಂಸದೆ, ಉದ್ದು, ಎಳ್ಳು, ಉಚ್ಚಳ್ಳು, ನವಣೆ, ಸಜ್ಜೆ, ಮೆಕ್ಕೆಜೋಳ, ತೊಗರಿ, ಅವರೆ, ಸೂರ್ಯಕಾಂತಿ, ಹುರುಳಿ, ಆರ್ಕಾ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ.ಅದರಲ್ಲಿ ಮುಖ್ಯವಾಗಿ ರಾಗಿ ಮತ್ತು ಶೇಂಗಾ ಬೆಳೆಯೇ ಜಿಲ್ಲೆಯ ಪ್ರಧಾನ ಬೆಳೆಯಾಗಿದೆ. ಈ ಭಾರಿ ಜಿಲ್ಲೆಯಲ್ಲಿ 192000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ ಜೂ.15 ರಿಂದ ಜುಲೈ 15 ರವರೆಗೆ ಶೇಂಗಾ ಬಿತ್ತನೆ ಮಾಡಲು ಸಕಾಲವಾಗಿದೆ ಅದೇ ರೀತಿಯಲ್ಲಿ ರಾಗಿ ಬಿತ್ತನೆ ಮಾಡಲು ಇದು ಸಕಾಲವಾಗಿದೆ. ಜಿಲ್ಲೆಯ ರೈತರು ಪ್ರಧಾನ ಬೆಳೆಗಳಾದ ಶೇಂಗಾ ಹಾಗೂ ರಾಗಿ ಬೆಳೆಗಳನ್ನು ಬಿತ್ತಲು ಭೂಮಿ ಹಸನು ಮಾಡಿಕೊಂಡು ಕಾಯುತ್ತಿದ್ದಾರೆ. ನಿರೀಕ್ಷೆ ಯಂತೆ ಬರುವ ಜೂನ್ ತಿಂಗಳಲ್ಲಿ ಮಳೆ ವಿಳಂಬ ವಾದರೆ ಬಿತ್ತನೆ ಮಾಡಲು ತೊಂದರೆ ಉಂಟಾಗಿ ಬೆಳೆ ನಷ್ಟವಾಗುತ್ತದೆ.
● ಚಿ.ನಿ. ಪುರುಷೋತ್ತಮ್