ಶ್ರೀನಗರ: ಮಂಗಳವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ಮತ್ತು 4.8 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.
ಮೊದಲ ಭೂಕಂಪವು ಮಂಗಳವಾರ ಬೆಳಿಗ್ಗೆ 6:45 ರ ಸುಮಾರಿಗೆ ಸಂಭವಿಸಿದ್ದು ಇದರ 4.9 ತೀವ್ರತೆ ಹೊಂದಿತ್ತು ಎನ್ನಲಾಗಿದೆ ಇದಾದ ಬಳಿಕ ಎರಡನೇ ಕಂಪನ ಸಂಭವಿಸಿದ್ದು ಇದರ ತೀವ್ರತೆ 4.8 ದಾಖಲಾಗಿತ್ತು ಅಲ್ಲದೆ ಇದರ ಕೇಂದ್ರ ಬಿಂದು ಸುಮಾರು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪನದಿಂದ ಯಾವುದೇ ಪ್ರಾಣಹಾನಿಯಾದ ಕುರಿತು ವರದಿಯಾಗಿಲ್ಲ ಎನ್ನಲಾಗಿದ್ದು ಅಧಿಕಾರಿಗಳು ಈ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಭೂಕಂಪ ಸಂಭವಿಸಿದ ಕೂಡಲೇ ಮನೆಯೊಳಗಿದ್ದ ಜನ ಗಾಬರಿಗೊಂಡು ಮನೆಯಿಂದ ಹೊರ ಓಡಿ ಬಂದಿದ್ದಾರೆ ಅಲ್ಲದೆ ಮುಂಜಾನೆ ಈ ಕಂಪನ ಸಂಭವಿಸಿದ್ದ ಪರಿಣಾಮ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Kiccha Sudeep: ಸೋಲುವುದೇ ಗೆಲ್ಲುವುದಕ್ಕೋಸ್ಕರ.. ಹೊಸಬರಿಗೆ ಕಿಚ್ಚನ ಕಿವಿಮಾತು