ನವದೆಹಲಿ: ಮಂಗಳವಾರ ಮುಂಜಾನೆ ( ಫೆ.28 ರಂದು) ಮಣಿಪುರ, ಮೇಘಾಲಯದಲ್ಲಿ ಭೂಮಿ ಕಂಪಿಸಿದ್ದು, ಇದರೊಂದಿಗೆ ಅಫ್ಘಾನಿಸ್ತಾನ ಹಾಗೂ ತಜಕಿಸ್ತಾನದಲ್ಲೂ ಭೂಮಿ ಕಂಪನದ ಅನುಭವಾಗಿದೆ.
ಮಣಿಪುರ ನೋನಿ ಜಿಲ್ಲೆಯಲ್ಲಿ 25 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ಪ್ರಮಾಣ ದಾಖಲಾಗಿದೆ. ಇನ್ನು ಮೇಘಾಲಯದ ತುರಾ ಜಿಲ್ಲೆಯಲ್ಲಿ 29 ಕಿ.ಮೀ ಆಳದಲ್ಲಿ 3.7 ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪನದ ಅನುಭವವಾಗಿದೆ.
ಇದನ್ನೂ ಓದಿ: 2023-24ನೇ ಸಾಲಿನಲ್ಲೇ 7ನೇ ವೇತನ ಆಯೋಗ ಜಾರಿಗೆ: ಸಿಎಂ ಬೊಮ್ಮಾಯಿ
ಇದರೊಂದಿಗೆ ಅಫ್ಘಾನಿಸ್ತಾನ ಹಾಗೂ ತಜಕಿಸ್ತಾನದಲ್ಲಿ ಮತ್ತೆ ಭೂ ಕಂಪನ ಸಂಭವಿಸಿದೆ. 4.1 ತೀವ್ರತೆ ಪ್ರಮಾಣದ ಭೂಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. 10ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ತಜಕಿಸ್ತಾನದಲ್ಲೂ 10ಕಿ.ಮೀ ಆಳದಲ್ಲಿ 4.3 ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.
ಇತ್ತೀಚೆಗಷ್ಟೇ ಗುಜರಾತ್ ನ ರಾಜ್ ಕೋಟ್, ಮಧ್ಯ ಪ್ರದೇಶದ ಇಂದೋರ್ ಭಾಗದಲ್ಲಿ ಭೂಮಿ ಕಂಪಿಸಿತ್ತು.