ಶ್ರೀನಗರ/ಪಾಟ್ನಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮುಂಜಾನೆ ಭೂಮಿ ಕಂಪಿಸಿದೆ. ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಪ್ರಮಾಣ ದಾಖಲಾಗಿದೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಬೆಳಿಗ್ಗೆ 10.10 ಕ್ಕೆ ಭೂಮಿ ಕಂಪಿಸಿದೆ. 10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹೇಳಿದೆ. ಸದ್ಯ ಯಾವುದೇ ಸಾವು – ನೋವು ಸಂಭವಿಸಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Punjab Military: ಬಟಿಂಡಾ ಸೇನಾ ಘಟಕದಲ್ಲಿ ಗುಂಡಿನ ದಾಳಿ; ನಾಲ್ವರು ಯೋಧರ ದುರಂತ ಅಂತ್ಯ
ಇನ್ನು ಬುಧವಾರ ಮುಂಜಾನೆ ಬಿಹಾರದ ಅರಾರಿಯಾ ಪ್ರದೇಶದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪುರ್ನಿಯಾ ಬಳಿ 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಕತಿಹಾರ್ ಮತ್ತು ಅರಾರಿಯಾದ ಪಕ್ಕದ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಹೇಳಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿ-ಎನ್‌ಸಿಆರ್, ಹರ್ಯಾಣ, ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿದೆ.