Advertisement

Earthquake: ತೈವಾನ್ ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ 6.0 ತೀವ್ರತೆಯ ಭೂಕಂಪ

10:29 AM Apr 04, 2024 | Team Udayavani |

ಟೋಕಿಯೋ: ತೈವಾನ್‌ನಲ್ಲಿ ಸಂಭವಿಸಿದ ಭೂಕಂಪ ಮರೆಯುವ ಮುನ್ನವೇ ಚೀನಾ ಮತ್ತು ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ. ವಾಯುವ್ಯ ಚೀನಾದ ಕಿಂಗ್ಹೈ ಪ್ರಾಂತ್ಯದ ಮಂಗ್ಯಾ ನಗರದಲ್ಲಿ ಗುರುವಾರ ಬೆಳಗ್ಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರ (ಸಿಇಎನ್‌ಸಿ) ತಿಳಿಸಿದೆ.

Advertisement

ಕಂಪನದ ಕೇಂದ್ರಬಿಂದು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಮತ್ತೊಂದೆಡೆ, ಜಪಾನ್‌ನ ಹೊನ್ಶು ಪೂರ್ವ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಇದರ ಕೇಂದ್ರ ಬಿಂದು 32 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಈ ಎರಡು ಭೂಕಂಪಗಳಿಗೆ ಸಂಬಂಧಿಸಿದ ಯಾವುದೇ ಜೀವಹಾನಿ ಮತ್ತು ಆಸ್ತಿ ಹಾನಿಯ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಚೀನಾದ ನೆರೆಯ ತೈವಾನ್ ನಲ್ಲಿ ಬುಧವಾರ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು ಬಳಿಕ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನಲೆಯಲ್ಲಿ ಚೀನಾ ಮತ್ತು ಜಪಾನ್ ನಲ್ಲಿ ಕಂಪನ ಉಂಟಾಗಿ ಆತಂಕ ಎದುರಾಗಿದೆ. ತೈವಾನ್‌ನಲ್ಲಿ ಇದುವರೆಗೆ ಒಂಬತ್ತು ಜನರು ಸಾವನ್ನಪ್ಪಿದ್ದರೆ, 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.100 ಕ್ಕೂ ಹೆಚ್ಚು ಕಟ್ಟಡಗಳು, ಅನೇಕ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಇಬ್ಬರು ಭಾರತೀಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಕೂಡ ಮುಂದುವರೆದಿದೆ.

ಇದನ್ನೂ ಓದಿ: Forbes ನಿಯತಕಾಲಿಕ ಬಿಡುಗಡೆ: ಜಗತ್ತಿನ ಶ್ರೀಮಂತರ ಪಟ್ಟಿಗೆ ಭಾರತದಿಂದ 25 ಮಂದಿ

Advertisement

Udayavani is now on Telegram. Click here to join our channel and stay updated with the latest news.

Next