Advertisement

Manipur’s Bishnupur ಭೂಕಂಪ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು

08:28 AM Apr 16, 2023 | Team Udayavani |

ಮಣಿಪುರ: ಬಿಷ್ಣುಪುರ ಜಿಲ್ಲೆಯಲ್ಲಿ ರವಿವಾರ(ಎ.15) ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Advertisement

ಕೇಂದ್ರದಿಂದ ಬಂದ ವರದಿಗಳ ಪ್ರಕಾರ, ಬಿಷ್ಣುಪುರದ ವಾಯುವ್ಯಕ್ಕೆ ಬೆಳಿಗ್ಗೆ 7:22 ಕ್ಕೆ (ಸ್ಥಳೀಯ ಕಾಲಮಾನ) ಭೂಕಂಪ ಸಂಭವಿಸಿದೆ.

ಭೂಕಂಪದಿಂದ ಸದ್ಯದ ಮಟ್ಟಿಗೆ ಯಾವುದೇ ಆಸ್ತಿ-ಪಾಸ್ತಿ, ಪ್ರಾಣ ಹಾನಿಯ ವರದಿ ಆಗಿಲ್ಲ.

ಈ ವರ್ಷದ ಜನವರಿಯಲ್ಲಿ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ 4.8 ರ ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next