ಟೋಕಿಯೊ : ಪಶ್ಚಿಮ ಜಪಾನ್‌ನ ಇಶಿಕಾವಾ ಪ್ರದೇಶದಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭೂಕಂಪದಿಂದಾಗಿ ಜಪಾನ್ ನ ಪ್ರವಾಸಿ ತಾಣವಾದ ನಾಗಾನೊ ಮತ್ತು ಕನಜಾವಾ ನಡುವೆ ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ಸೂಜಿ ನಗರದಲ್ಲಿ ಭೂಕುಸಿತ ಸಂಭವಿಸಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ತೀವ್ರತೆ 6.3 ಎಂದು ದಾಖಲಾಗಿದೆ. ಜಪಾನಿನಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ, ಇದು ಪೆಸಿಫಿಕ್ ಮಹಾಸಾಗರದ “ರಿಂಗ್ ಆಫ್ ಫೈರ್” ಪ್ರದೇಶದಲ್ಲಿದೆ. ಇದು ಆಗ್ನೇಯ ಏಷ್ಯಾದಿಂದ ಪೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿದೆ.
ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.