Advertisement

ಅಂಡರ್ 19 ವಿಶ್ವಕಪ್ ಪಂದ್ಯದ ವೇಳೆ ಕಂಪಿಸಿದ ಭೂಮಿ: ವಿಡಿಯೋ ನೋಡಿ

10:57 AM Jan 30, 2022 | Team Udayavani |

ಪೋರ್ಟ್ ಆಫ್ ಸ್ಪೈನ್: ಕೆರಿಬಿಯನ್ ದ್ವೀಪ ಸಮೂಹದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ವೇಳೆ ಭೂಕಂಪನದ ಅನುಭವವಾಗಿದೆ. ಪ್ಲೇಟ್ ಸೆಮಿ ಫೈನಲ್ ಪಂದ್ಯದ ವೇಳೆ ಈ ಅನುಭವವಾಗಿದ್ದು, ವಿಡಿಯೋದಲ್ಲಿ ದಾಖಲಾಗಿದೆ.

Advertisement

ಟ್ರನಿಡಾಡ್ ನ ಪೋರ್ಟ್ ಆಫ್ ಸ್ಪೇನ್ ನಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಭೂಕಂಪನದ ಅನುಭವವಾಗಿದೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಗಳು ನಡುಗಿದ್ದು, ಮೈದಾನದಲ್ಲಿ ಆಡುತ್ತಿದ್ದ ಆಟಗಾರರಿಗೆ ಯಾವುದೇ ಅನುಭವವಾಗಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಿದೆ.

ಪೋರ್ಟ್ ಆಫ್ ಸ್ಪೇನ್‌ನ ಕರಾವಳಿಯಲ್ಲಿ 5.2 ತೀವ್ರತೆಯ ಭೂಕಂಪವಾಗಿದೆ. ಕಾಮೆಂಟರಿ ಬಾಕ್ಸ್ ನಡುಗಲು ಪ್ರಾರಂಭಿಸಿದಾಗ ಐಸಿಸಿ ನಿರೂಪಕ ಆಂಡ್ರ್ಯೂ ಲಿಯೊನಾರ್ಡ್ ನಡುಕದ ಅನುಭವನ್ನು ವಿವರಿಸಿದರು. “ನಾವು… ನಾವು ಇದೀಗ ಬಾಕ್ಸ್‌ನಲ್ಲಿ ಭೂಕಂಪದ ಅನುಭವ ಎದುರಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪವಾಗುತ್ತಿದೆ. 15-20 ಸೆಕೆಂಡುಗಳ ಕಾಲ ಕಂಪನದ ಅನುಭವವಾಯಿತು” ಎಂದು ಅವರು ಹೇಳಿದರು.

ಇದನ್ನೂ ಓದಿ:ಕೋರಿ ಆ್ಯಂಡರ್ಸನ್ ಬ್ಯಾಟಿಂಗ್ ಸಾಹಸ: ಲೆಜೆಂಡ್ಸ್ ಕ್ರಿಕೆಟ್ ಕಪ್ ಗೆದ್ದ ವರ್ಲ್ಡ್ ಜೈಂಟ್ಸ್

ಜಿಂಬಾಬ್ವೆ ಇನ್ನಿಂಗ್ಸ್‌ನ 6 ನೇ ಓವರ್‌ನಲ್ಲಿ ನಡುಕ ದೂರದರ್ಶನ ಕ್ಯಾಮೆರಾಗಳನ್ನು ಅಲುಗಾಡಿಸಿತು. ಭೂಕಂಪದಿಂದ ಆಟಕ್ಕೆ ತೊಂದರೆಯಾಗದ ಕಾರಣ ಐರ್ಲೆಂಡ್‌ನ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೀಸ್ ಬೌಲಿಂಗ್ ಮುಂದುವರಿಸಿದರು.

Advertisement

ಅಂಡರ್ 19 ವಿಶ್ವಕಪ್ ಭೂಕಂಪನದ ಅನುಭವದ ವಿಡಿಯೋವನ್ನು ಪತ್ರಕರ್ತ ಪೀಟರ್ ಡೆಲ್ಲಾ ಪೆನ್ನಾ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next