ಮನಿಲಾ: ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ ಶನಿವಾರ ಸಂಜೆ 7.5 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ. ಇದರ ಜೊತೆಗೆ ಸುನಾಮಿ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC)ಎಚ್ಚರಿಕೆ ನೀಡಿದೆ.
ಸುಮಾರು 63 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ್ದು ದಾಖಲಾಗಿದೆ. ಭೂಕಂಪವು ಪ್ರಬಲವಾಗಿದ್ದು, ಇದು ಸುನಾಮಿಗೆ ಕಾರಣವಾಗಬಹುದು. ದೊಡ್ಡ ದೊಡ್ಡ ಅಲೆಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳಿದ್ದು ಎಚ್ಚರಿಕೆಯಿಂದ ಇರುವಂತೆ ಫಿಲಿಪ್ಪೈನ್ಸ್‌ಗೆ ಅಮೆರಿಕವೂ ಮಾಹಿತಿ ನೀಡಿದೆ.
ಭೂಕಂಪ ಮತ್ತು ಸುನಾಮಿ ಹಿನ್ನಲೆಯಲ್ಲಿ ಫಿಲಿಪ್ಪೈನ್ಸ್‌ನ ಕರಾವಳಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಬಲ ಭೂಕಂಪದಿಂದ ಸಾವು-ನೋವು ಸಂಭವಿಸಿದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.