Advertisement

ಭೂಮಿ ರಚನೆಯಾಗಿದ್ದು ಕೆಲವೇ ಲಕ್ಷ ವರ್ಷಗಳಲ್ಲಿ!

08:02 PM Jun 19, 2023 | Team Udayavani |

ಹಿಂದಿನ ಸಿದ್ಧಾಂತಗಳು ಹೇಳುವಂತೆ 5ರಿಂದ 10 ಕೋಟಿ ವರ್ಷಗಳಲ್ಲ

Advertisement

ನವದೆಹಲಿ: ಭೂಮಿ ಹುಟ್ಟಿದ್ದು ಹೇಗೆ? ಯಾವಾಗ? ಈ ಪ್ರಶ್ನೆಗಳಿಗೂ ಅಂದಿನಿಂದ ಇಂದಿನವರೆಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಇದೀಗ ವಿಜ್ಞಾನಿಗಳ ತಂಡವೊಂದು ಮಾಡಿದ ನೂತನ ಸಂಶೋಧನೆಯ ಪ್ರಕಾರ, ಭೂಮಿಯ ನಿರ್ಮಾಣಕ್ಕೆ ಕೆಲವೇ ಲಕ್ಷ ವರ್ಷಗಳು ಮಾತ್ರ ತಗುಲಿವೆ. ಹಿಂದೆ ಇದೇ ಭೂಮಿಯ ರಚನೆಗೆ 5ರಿಂದ 10 ಕೋಟಿ ವರ್ಷಗಳಾಗಿರಬಹುದು ಎಂದು ಹೇಳಲಾಗಿತ್ತು. ಎಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ ಭೂಮಿಯಲ್ಲಿನ ನೀರೂ ಕೂಡ ಬಾಹ್ಯಾಕಾಶದಿಂದಲೇ ಬಂದಿದ್ದು, ಭೂಮಿಯಲ್ಲೇ ಹುಟ್ಟಿದ್ದಲ್ಲ!

ಹೀಗೆಂದು ನೇಚರ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಹೇಳಲಾಗಿದೆ. ಈ ಸಂಶೋಧನೆಯಲ್ಲಿ ಪಾಲ್ಗೊಂಡ ಮಾರ್ಟಿನ್‌ ಬಿಜಾರೊ ಎಂಬ ವಿಜ್ಞಾನಿ ಹಲವು ಸಂಗತಿಗಳನ್ನು ವಿವರಿಸಿದ್ದಾರೆ. 450 ಕೋಟಿ ವರ್ಷಗಳ ಹಿಂದೆ ಸೂರ್ಯ ಇನ್ನೂ ತಾರುಣ್ಯಾವಸ್ಥೆಯಲ್ಲಿದ್ದಾಗ ಅವನ ಸುತ್ತ ಅನಿಲ ಮತ್ತು ಧೂಳಿನ ಒಂದು ವೃತ್ತಾಕಾರದ ಪದರವಿತ್ತು. ಇಲ್ಲಿನ ಸಣ್ಣಸಣ್ಣ ಭಾಗಗಳು ಪರಸ್ಪರ ಡಿಕ್ಕಿ ಹೊಡೆಯುತ್ತ ಭೂಮಿಯ ರಚನೆಯಾಗಿದೆ. ಈ ಸಣ್ಣಸಣ್ಣ ಕಣಗಳಲ್ಲೇ ನೀರಿನಂಶವೂ ಇತ್ತು. ಭೂಮಿಯ ರಚನೆಯಾಗುವಾಗಲೇ ನೀರೂ ಅದರೊಂದಿಗೆ ಸೇರಿಕೊಂಡಿತ್ತು. ಹಿಂದಿನ ಸಿದ್ಧಾಂತಗಳ ಪ್ರಕಾರ ಭೂಮಿಯ ಸೃಷ್ಟಿಯಾಗಿ ಅಂದಾಜು 10 ಕೋಟಿ ವರ್ಷಗಳ ನಂತರ ನೀರು ಸೃಷ್ಟಿಯಾಯಿತು ಎಂಬುದು ತಪ್ಪು ಎಂಬ ಹೊಸ ತರ್ಕವನ್ನು ಮಾರ್ಟಿನ್‌ ಬಿಜಾರೊ ತಂಡ ಮುಂದಿಟ್ಟಿದೆ.

ಹೀಗೆ ನೋಡಿದಾಗ ನಮ್ಮ ತಾರಾಮಂಡಲದಲ್ಲಿ ಭೂಮಿಯಂತಹ ಇನ್ನೂ ಹಲವು ಗ್ರಹಗಳಿವೆ. ಅಲ್ಲೂ ಜೀವಜಗತ್ತು ಇರುವುದೂ ಖಚಿತ ಎಂದು ವಿಜ್ಞಾನಿಗಳು ಹೇಳುತ್ತಾರೆ. ಭೂಮಿಯ ಮಾದರಿಯಲ್ಲೇ ಇನ್ನೂ ಬೇಕಾದಷ್ಟು ಗ್ರಹಗಳು ರಚನೆಯಾಗಿರುವ ಒಂದು ಸುಳಿವನ್ನು ಹೊಸ ಶೋಧ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next