Advertisement
ಶ್ರೀನಿವಾಸಪುರ ತಾಲೂಕು ಹೊಗಳಗೆರೆತೋಟಗಾರಿಕೆ ಮಾವು ಉತ್ಕೃಷ್ಟ ಕೇಂದ್ರಕ್ಕೆ ಬುಧವಾರ ಇಸ್ರೇಲ್ ದೇಶದ ವಿಜ್ಞಾನಿಗಳು ಹಾಗೂ ರಾಜ್ಯದ ಕೃಷಿ ಕಲ್ಪ, ಮಾರುಕಟ್ಟೆ ಲಿಂಕ್‌ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿ ಗಳೊಂದಿಗೆ ಇಲ್ಲಿನ ಮಾವು ಬೆಳೆ ಬಗ್ಗೆ ತೋಟಗಾರಿಕೆಇಲಾಖೆ ಕೈಗೊಂಡಿರುವ ಮಾದರಿಯ ಬಗ್ಗೆಸುಮಾರು ಎರಡು ಗಂಟೆಗಳ ಕಾಲ ಗಿಡಗಳು, ಬೆಳೆ,ಭೂಮಿ ವಿಸ್ತಾರ ಅನುಸರಿಸುತ್ತಿರುವ ವಿಧಾನಗಳಬಗ್ಗೆ ಪರಿಶೀಲನೆ ನಡೆಸಿದರು.
Related Articles
Advertisement
ಹೊಸ ಯೋಜನೆ: ಲಾಲ್‌ಬಾಗ್‌ನ ಕೆಎಸ್‌ಹೆಚ್ ಎಂಎ ಎಕ್ಸ್‌ಕ್ಯೂಟಿವ್ ಡೈರಕ್ಟರ್ ಡಾ.ಪರಶಿವಮೂರ್ತಿ ಮಾತನಾಡಿ, ಇಲ್ಲಿನ ಮಾವು ವಿದೇ ಶಗಳಿಗೆ ರಫ್ತು ಮಾಡಲು ರೈತ ಉತ್ಪಾದಕ ಗುಂಪುಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿಇದನ್ನು ಕೈಗಾರಿಕಾ ವಲಯವಾಗಿ ನೋಡಲುಹೊಸ ಹೊಸ ಯೋಜನೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಹೊಗಳಗೆರೆ ತೋಟಗಾರಿಕೆ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿ ಎಂ.ಲಾವಣ್ಯ, ಇಸ್ರೇಲ್‌ದೇಶದ ಡೆಪ್ಯೂಟಿ ಚೀಫ್ ಮಿಷನ್‌ನ ಏರಿಯಲ್‌ಸೈದಾಮನ್, ಕೃಷಿ ಕಲ್ಪ ಚೀಫ್ ಎಕ್ಸ್‌ಕ್ಯೂಟಿವ್‌ಕಚೇರಿಯ ಸಿ.ಎಂ.ಪಾಟೀಲ್, ಕೃಷಿ ಕಲ್ಪ ಮುಖ್ಯ ಪಾಟ್ನರ್‌ಶಿಪ್ ಮತ್ತು ಮಾರ್ಕೆಟಿಂಗ್‌ನ ಪವನ್ ಪಾಟೀಲ್, ತೊಟಗಾರಿಕೆಯ ಬಾಲಾಜಿ, ಬಾಲಕೃಷ್ಣ, ರೇವಂತ್ ಇತರರು ಹಾಜರಿದ್ದರು.