Advertisement

ನೀರಿನ ಮೂಲಗಳನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕು

01:15 PM Jan 11, 2018 | Team Udayavani |

ವಿಜಯಪುರ: ಹಿಂದಿನ ಕಾಲದಿಂದಲೂ ನದಿ ಪಾತ್ರಗಳ ದಂಡೆಯ ಮೂಲಕ ನಮ್ಮ ಸಂಸ್ಕೃತಿಗಳು ಪ್ರಾರಂಭವಾಗಿದ್ದು, ನೀರಿನ ಮೂಲಗಳನ್ನು ನಾಶ ಮಾಡುತ್ತಿವೆ ಎಂದು ಪ್ರಾಧ್ಯಾಪಕ ಡಾ.ವೀರಭದ್ರಪ್ಪ ಹೇಳಿದರು. ಪಟ್ಟಣದ ರೋಟರಿ ಸಂಸ್ಥೆ ವಾರದ ಸಭೆಯಲ್ಲಿ “ಜಲಸಂರಕ್ಷಣೆಗೆ ಮೊದಲ ಆದ್ಯತೆ’ ವಿಷಯ ಕುರಿತು ಅವರು ಮಾತನಾಡಿದರು.

Advertisement

ನೀರನ್ನು ವೈಜ್ಞಾನಿಕವಾಗಿ ಬಳಸುವುದನ್ನು ರೂಢಿಸಿಕೊಳ್ಳಿ: ನಮ್ಮ ರಾಷ್ಟ್ರದಲ್ಲಿ ಅದರಲ್ಲೂ ದಕ್ಷಿಣ ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಕುಡಿಯಲು ಯೋಗ್ಯವಾದ ನೀರನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಿದ್ದೇವೆ ಎಂದ ಅವರು, ಕೈಗಾರಿಕೆ ಹಾಗೂ ಇನ್ನಿತರೆಡೆಗೆ ಕುಡಿಯಲು ಯೋಗ್ಯವಾದ ನೀರನ್ನು ಬಳಕೆ ಮಾಡದೇ ಇದಕ್ಕೆ ಬಳಕೆ ಮಾಡಿದ ನೀರನ್ನು ವೈಜ್ಞಾನಿಕವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ವಿವರಿಸಿದರು.

ನೀರಿನ ಮೌಲ್ಯವೇ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದೇವೆ: ಒಂದು ಕಾಲದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕೆರೆಗಳಿದ್ದವು. ಆದರೇ ಈಗ 50ರಿಂದ60 ಕೆರೆಗಳಿರುವುದು ಸಾಂಕೇತಿಕವಾಗಿವೆ. ಹಿಂದಿನ ಕಾಲದಲ್ಲಿ ಒಂದು ಊರು ಎಂದರೇ ಅದರ ಬಳಕೆಗೆಂದು ಒಂದು ಕೆರೆ ಮತ್ತು ಕಲ್ಯಾಣಿಗಳನ್ನು ಕಟ್ಟುತ್ತಿದ್ದರು. ಆದರೇ ಈಗ ಅದನ್ನು ನಾಶ ಮಾಡುವ ಮೂಲಕ ನೀರಿನ ಮೌಲ್ಯವೇ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಅನ್ಯರಾಷ್ಟ್ರಗಳಲ್ಲಿ ನೀರಿನ ಬಳಕೆ ಹಾಗೂ ಸಿಗುವ ನೀರನ್ನು ಶೇಖರಣೆ ಮಾಡುವುದರ ಬಗ್ಗೆ ಅದರೇ ಆದ ಕಾನೂನು ಹಾಗೂ ಅಧ್ಯಯನವಿದೆ. ಇದರ ಪರಿವೆಯೇ ಇಲ್ಲದಂತೆ ಇಂದಿನ ಸಮಾಜ ನಡೆದುಕೊಳ್ಳುತ್ತಿರುವ ದುರ್ದೈವವೇ ಆಗಿದೆ ಎಂದು ತಿಳಿಸಿದರು.

ಮೌಲ್ಯಾಧಾರಿತ ಜೀವನದ ಬಗ್ಗೆ ತಿಳಿಸಿಕೊಡಬೇಕು: ಯಾವ ದೇಶದಲ್ಲಿ ಸಂಸ್ಕೃತಿ ಪರಂಪರೆ ಬಗ್ಗೆ ಅರಿವಿಲ್ಲವೋ ಅಂಥ ದೇಶವನ್ನು ಹುಚ್ಚು ರಾಷ್ಟ್ರವೆನ್ನುವುದು ಹೊರದೇಶಗಳ ಮಾತು ಆಗದಂತೆ ಇಂದಿನ ಪೀಳಿಗೆಗೆ ನಮ್ಮ ರಾಷ್ಟ್ರ ಸಂಸ್ಕೃತಿ ಹಾಗೂ ಪರಂಪರೆ ರಾಷ್ಟ್ರದಲ್ಲಿರುವ ವೈಶಿಷ್ಟ್ಯತೆ ಹಾಗೂ ಹಿರಿಯರು ನಮ್ಮಲ್ಲಿ ಬಿಟ್ಟು ಹೋದ ಮೌಲ್ಯಾಧಾರಿತ ಜೀವನದ ಬಗ್ಗೆ ತಿಳಿಸಿಕೊಡಬೇಕು ಎಂದು ಕಿವಿ ಮಾತು ಹೇಳಿದರು.

Advertisement

ರೋಟರಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಮಾನವನ ಜೀವನದಲ್ಲಿ ನೀರಿನ ಪಾತ್ರ ಅತಿ ಮುಖ್ಯವಾಗಿದ್ದು ಪ್ರತಿಯೊಬ್ಬರು ಮಿತವ್ಯಯವಾಗಿ ನೀರನ್ನು ಬಳಸಬೇಕು. ರಾಜಕೀಯ ಇಚ್ಛಾಶಕ್ತಿಯಲ್ಲಿ ನೀರಿನ ಮಹತ್ವವೂ ತಿಳಿಯುವಂತೆ ಮಾಡುವ ಮೂಲಕ ಕಣ್ತೆರೆಯುವಂತೆ ಯುವ ಜನತೆ ಮಾಡಬೇಕು ಎಂದರು.

ಸಭೆಯಲ್ಲಿ ಕಾರ್ಯದರ್ಶಿ ರುದ್ರಮೂರ್ತಿ, ರೋಟಿರಿಯನ್‌ ವೀರಭದ್ರಪ್ಪ, ಸದ್ಯೋ ಜಾತಪ್ಪ, ಶಿವಪ್ರಸಾದ್‌, ಮಲ್ಲಿಕಾರ್ಜುನಪ್ಪ, ಕುಮಾರಸ್ವಾಮಿ, ಚ.ವಿಜಯಬಾಬು, ರುದ್ರೇಶ್‌ ಮೂರ್ತಿ, ಶೈಲೇಂದ್ರ, ವಿನಯ್‌ ಕುಮಾರ್‌, ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next