Advertisement
ಈಗಾಗಲೇ ತ್ಯಾಜ್ಯಗಳಲ್ಲದೆ ನಗರಸಭೆ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ಗ್ಲಾಸ್ ಹಾಗೂ ಇ ವೇಸ್ಟ್ (ಎಲೆಕ್ಟ್ರಾನಿಕ್ ತ್ಯಾಜ್ಯ) ಸಂಗ್ರಹಣೆ ಮಾಡಲಾಗುತ್ತಿದೆ.
15.5ರಿಂದ 18.5 ಟನ್‌ಗಳಷ್ಟು ಸಂಗ್ರಹವಾಗುತ್ತಿದೆ. ಇಲ್ಲಿ ಗ್ಲಾಸ್ ವೇಸ್ಟ್ ವಿಲೇವಾರಿ ಮಾಡುತ್ತಿದ್ದು, ಇ ತ್ಯಾಜ್ಯ ವಿಲೇವಾರಿಯಾಗದೆ ಸಂಗ್ರಹವಾಗುತ್ತಿದೆ. ಇ ತ್ಯಾಜ್ಯ ಸಂಗ್ರಹಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇ ತ್ಯಾಜ್ಯಗಳು ಯಾವುವು?
ಇ ತ್ಯಾಜ್ಯಗಳಾದ ಎಲ್‌ಸಿಡಿ/ಎಲ್‌ಇಡಿ ಟಿವಿ, ಎಲ್ಲ ರೀತಿಯ ಹೋಂ ಅಪ್ಲಯನ್ಸಸ್, ಮಿಕ್ಸಿ ಗ್ರೈಂಡರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೈಕ್ರೋಓವನ್, ಐರನ್ ಬಾಕ್ಸ್, ಸ್ಪೀಕರ್, ಏರ್‌ಕಂಡಿಷನರ್, ಕೇಬಲ್ ವೈರ್, ಸ್ಮಾರ್ಟ್ ಫೋನ್, ಕಂಪ್ಯೂಟರ್, ಟಿವಿ ರಿಮೋಟ್, ಲ್ಯಾಂಪ್ಸ್, ಟ್ಯೂಬ್‌ಲೈಟ್ಸ್, ಸಿಎಫ್ಎಲ್, ಎಲ್ಲ ರೀತಿಯ ಬಲ್ಬ್, ರೈಸೆಲ್ ಬ್ಯಾಟರಿಸ್, ಟೋನರ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು.
Related Articles
Advertisement
ಇ ತ್ಯಾಜ್ಯವನ್ನು ಸುಡುವುದರಿಂದ ವಾಯುಮಾಲಿನ್ಯ ಉಂಟಾಗಿ ಮನುಷ್ಯರ ಹಾಗೂ ಇತರ ಜೀವಸಂಕುಲದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಕ್ಯಾನ್ಸರ್ ಹಾಗೂ ಇತರ ಮಾರಣಾಂತಿಕ ರೋಗಗಳು ಬರಲು ಕಾರಣವಾಗುತ್ತದೆ. ಆದ್ದರಿಂದ ಇನ್ನು ಮುಂದೆ ತ್ಯಾಜ್ಯಗ ಳನ್ನು ಕೊಡುವವರು ಇಂತಹ ತ್ಯಾಜ್ಯಗಳನ್ನು ಪ್ರತ್ಯೇಕ ತೆಗೆದಿರಿಸಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಬೇಕು.
ಪ್ರತಿದಿನ ಸಂಗ್ರಹವಾಗುವ 2.5 ಟನ್‌ನಷ್ಟು ಕೋಳಿ ತ್ಯಾಜ್ಯವನ್ನು ಶಿಹಾರ್ ಎಂಟರ್‌ಪ್ರೈಸಸ್ ಅವರ ರೆಂಡರಿಂಗ್ ಯುನಿಟ್‌ಗೆ ನೀಡಿ ಸಂಸ್ಕರಣೆ ಮಾಡಲಾಗುತ್ತಿದೆ. ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶಾ ಕೊಡವೂರು, ಲಯನ್ಸ್ ಜಿಲ್ಲೆ 317 ಸಿ ಗವರ್ನರ್ ಡಾ| ಎಂ.ಕೆ.ಭಟ್, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಗಣೇಶ್ ಪೈ ಪತ್ರಿಕಾಗೋಷ್ಠಿಯಲ್ಲಿದ್ದರು.
ಎಲ್ಲೆಲ್ಲಿ ಇ ತ್ಯಾಜ್ಯ ಸಂಗ್ರಹ?ಇ ತ್ಯಾಜ್ಯವನ್ನು ಬನ್ನಂಜೆ, ಬೀಡಿನಗುಡ್ಡೆ, ಮಲ್ಪೆ ಬೀಚ್‌ನ ಒಣ, ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣ ಘಟಕ, ಅಲೆವೂರು ಘನತ್ಯಾಜ್ಯ ಸಂಸ್ಕರಣ ಘಟಕ, ಮಣಿಪಾಲ ಸಬ್ ಫೀಸ್‌ನಲ್ಲಿ ನಿತ್ಯ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಂದು ಕೊಡಬಹುದು ಹಾಗೂ ಪ್ರತಿ ತಿಂಗಳ 2ನೇ ಶನಿವಾರ ಮನೆ ಮನೆ ಕಸ ಸಂಗ್ರಹ ವಾಹನಗಳಿಗೂ ಕೊಡಬಹುದು.