Advertisement

E.V. ಬ್ಯಾಟರಿ ಉತ್ಪಾದನೆ: ಐಬಿಸಿ ಜತೆ ಒಡಂಬಡಿಕೆ

11:34 PM Aug 01, 2023 | Team Udayavani |

ಬೆಂಗಳೂರು: ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್‌ ಬ್ಯಾಟರಿಗಳನ್ನು ತಯಾರಿಸುವ ಇಂಟರ್‌ ನ್ಯಾಷನಲ್‌ ಬ್ಯಾಟರಿ ಕಂಪೆನಿ (ಐಬಿಸಿ) ಮತ್ತು ರಾಜ್ಯ ಸರಕಾರ 8 ಸಾವಿರ ಕೋಟಿ ರೂ. ಹೂಡಿಕೆಗೆ ಅವಕಾಶ ಮಾಡಿಕೊಡುವ ಒಡಂಬಡಿಕೆಗೆ ಮಂಗಳವಾರ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್‌ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು. ಈ ಒಡಂಬಡಿಕೆಗೆ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದರು.

Advertisement

ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ, ಮರುಬಳಕೆಗೆ ಬರುವಂಥ ಲೀಥಿಯಾನ್‌ ಬ್ಯಾಟರಿಗಳ ಉತ್ಪಾದನೆಯನ್ನು ಕಂಪೆನಿಯು 1 ವರ್ಷದಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಿದೆ. ಈ ಉದ್ದೇಶಕ್ಕಾಗಿ ಕಂಪೆನಿಯ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿ 100 ಎಕರೆ ಜಮೀನನ್ನು ಕೊಡಲಿದೆ. ನಾನು ಸಚಿವನಾದ ಅನಂತರ ಈ ಕಂಪೆನಿಯೊಂದಿಗೆ ಮೂರು ಸುತ್ತು ಮಾತುಕತೆ ನಡೆಸಿದ್ದೇನೆ. ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಮನದಟ್ಟು ಮಾಡಿಕೊಡಲಾಗಿತ್ತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next