Advertisement

ಇ-ಶೌಚಾಲಯ ಭೂಮಿಪೂಜೆ

02:56 PM Jul 23, 2018 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಭಾನುವಾರ ವಿದ್ಯಾನಗರದ ಎಸ್‌.ಎ. ರವೀಂದ್ರನಾಥ್‌ ಉದ್ಯಾನವನದಲ್ಲಿ ಸಂಸದ ಸಿದ್ದೇಶ್ವರ್‌, ಶಾಸಕ ರವೀಂದ್ರನಾಥ್‌, ಮೇಯರ್‌ ಇ-ಶೌಚಾಲಯ ಭೂಮಿಪೂಜೆ ನೆರವೇರಿಸಿದರು.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಇ- ಶೌಚಾಲಯಗಳು ಸಾಮಾನ್ಯ ಶೌಚಾಲಯಕ್ಕಿಂತಲೂ ಭಿನ್ನವಾಗಿರುತ್ತವೆ. ಫ್ಲಷ ಮಾಡಲು 1.5 ಲೀಟರ್‌, ಇಡೀ ಶೌಚಾಲಯದ ಸ್ವತ್ಛತೆಗೆ 4.5 ಲೀಟರ್‌ ನೀರು ಮಾತ್ರ ಬೇಕಾಗುತ್ತದೆ. ವ್ಯಕ್ತಿಯ ತಾಪಮಾನ ಆಧರಿಸಿ, ಇ-ಶೌಚಾಲಯದಲ್ಲಿನ ಸೆನ್ಸಾರ್‌ಗಳು ಫ್ಲಷ ಮಾಡುವುದು ವಿಶೇಷ.

ಕೇರಳದ ತಿರುವನಂತಪುರದ ಇರಮ್‌ ಸೈಂಟಿಫಿಕ್‌ ಕಂಪನಿ ಮೊದಲ ಹಂತದಲ್ಲಿ ಆಂಜನೇಯ ಬಡಾವಣೆ, ಕಾಸಲ್‌ ಪಾರ್ಕ್‌, ದೇವರಾಜ ಅರಸು ಪಾರ್ಕ್‌, ಮಕ್ಕಳ ಉದ್ಯಾನವನ, ಹಿರಿಯ ನಾಗರಿಕರ ಉದ್ಯಾನವನ, ಜಯನಗರ ಬಿ ಬ್ಲಾಕ್‌ ಪಾರ್ಕ್‌, ಶಾಮನೂರು ಬಸವರಾಜಪ್ಪ ಪಾರ್ಕ್‌, ಗಂಗೂಬಾಯಿ ಹಾನಗಲ್‌ ಪಾರ್ಕ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಇ-ಶೌಚಾಲಯ ನಿರ್ಮಿಸಲಿದೆ.
 
ಸಂಪೂರ್ಣ ಸ್ಟೀಲ್‌ನಿಂದ ನಿರ್ಮಾಣವಾಗಿರುವ ಇ-ಶೌಚಾಲಯ ತುಕ್ಕು ಹಿಡಿಯುವುದೇ ಇಲ್ಲ. 1, 2, 5 ರೂಪಾಯಿ ಕಾಯಿನ್‌ ಹಾಕಿದರೆ ಮಾತ್ರ ಬಾಗಿಲು ತೆರೆಯುತ್ತದೆ. 10 ಜನರು ಉಪಯೋಗಿಸಿದ ನಂತರ ತಾನೇ ತಾನಾಗಿ ಸ್ವತ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಗುತ್ತಿಗೆದಾರ ಜಿ. ಶ್ರೀಕುಮಾರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next