Advertisement

ಇ-ಶ್ರಮ್‌’ಪೋರ್ಟಲ್‌ : ಮೊದಲ ದಿನ 1.65 ಲಕ್ಷ ಕಾರ್ಮಿಕರು ನೋಂದಣಿ

11:02 PM Aug 27, 2021 | Team Udayavani |

ನವ ದೆಹಲಿ : ಅಸಂಘಟಿತ ಕಾರ್ಮಿಕರ ಮಾಹಿತಿ ಕೋಶ “ಇ-ಶ್ರಮ್‌’ ಪೋರ್ಟಲ್‌ ಗುರುವಾರ ಆರಂಭಗೊಂಡಿದ್ದು, ಮೊದಲ ದಿನವೇ ದೇಶಾದ್ಯಂತ 1.65 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಅಸಂಘಟಿತ ಕಾರ್ಮಿಕ ಕ್ಷೇತ್ರಕ್ಕೆ ಸ್ಪಷ್ಟ ಚೌಕಟ್ಟು ಒದಗಿಸುವ, ಕಾರ್ಮಿಕ ಕಲ್ಯಾಣ ಯೋಜನೆಗಳನ್ನು, ಸಹಾಯಧನಗಳನ್ನು ಸೋರಿಕೆಯಿಲ್ಲದೆ ನೇರವಾಗಿ ಒದಗಿಸುವ ಉದ್ದೇಶವನ್ನು ಇ-ಶ್ರಮ್‌ ಹೊಂದಿದೆ. ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಂಡ ಅಸಂಘಟಿತ ಕಾರ್ಮಿಕರಿಗೆ ಅಪಘಾತ ವಿಮೆ ಒದಗಿಸಲಾಗುತ್ತದೆ.

ಮೃತ್ಯು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ವಿಮೆ ನೀಡಲಾಗುತ್ತದೆ.

ಇದನ್ನೂ ಓದಿ :ವಿಮಾನಯಾನ ಮೂಲ ಸೌಕರ್ಯ ಯೋಜನೆ ತ್ವರಿತಗತಿ ಅನುಷ್ಠಾನಕ್ಕೆ : ಸಿಎಂಗೆ ಸಚಿವ ಸಿಂಧಿಯಾ ಪತ್ರ

Advertisement

Udayavani is now on Telegram. Click here to join our channel and stay updated with the latest news.

Next