ಕಲಬುರಗಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಶನಿವಾರ ಜಿಲ್ಲೆಯಲ್ಲಿ ನಡೆದ ಇ-ಲೋಕ್ ಅದಾಲತ್‌ನಲ್ಲಿ 8,47.07,400 ಪರಿಹಾರ ಮೊತ್ತದ 1,751 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಆರ್. ಶೆಟ್ಟರ್ ತಿಳಿಸಿದ್ದಾರೆ.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರು ಹಾಗೂ ಕಾನೂನು ಸೇವೆಗಳ ಪ್ರಾ ಧಿಕಾರದಅಧ್ಯಕ್ಷರಾದ ಆರ್.ಜೆ. ಸತೀಶ್ ಸಿಂಗ್ ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರ ಸಹಕಾರದಿಂದ ಇ-ಲೋಕ್ ಅದಾಲತ್ ನಡೆಸಲಾಗಿದೆಂದು ಅವರು ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳ ಮೆಗಾ ಇ-ಲೋಕ್ ಅದಾಲತ್ ಜರುಗಿದ್ದು, ಕಕ್ಷಿದಾರರು ತಾವು ಇರುವ ಸ್ಥಳದಿಂದಲೇ ತಂತ್ರಜ್ಞಾನದ ಸಹಾಯದಿಂದ ಅಂದರೆ ವಿಡಿಯೋ ಕಾನ್ಪರೆನ್ಸ್ ಹಾಗೂ ವೆಬಿನಾರ್, ವಾಟ್ಸ್ ಆ್ಯಪ್ ಮೂಲಕ ಹಾಜರಾಗಿದ್ದು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ನ್ಯಾಯವಾದಿಗಳು ರಾಜಿ-ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
101 ಪ್ರಕರಣ ವಿಲೇವಾರಿ :
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ಆದೇಶದಂತೆ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಲಬುರಗಿ ಪೀಠದಲ್ಲಿ ಶನಿವಾರ ಜರುಗಿದ ಇ-ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 101 ಪ್ರಕರಣಗಳನ್ನು ವಿಲೇವಾರಿ ಮಾಡಿ ಒಟ್ಟಾರೆ 2,18,21,200 ರೂ. ಪರಿಹಾರ ಮೊತ್ತ ಮಂಜೂರು ಮಾಡಲಾಗಿದೆ. ಕರ್ನಾಟಕ ಉತ್ಛ ನ್ಯಾಯಾಲಯ ಕಲಬುರಗಿ ಪೀಠದ ನ್ಯಾಯಮೂರ್ತಿಗಳಾದ ನಟರಾಜ್ ರಂಗಸ್ವಾಮಿ, ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಹಾಗೂ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಪೀಠಗಳಲ್ಲಿ ಮೋಟಾರ್ ವಾಹನ ವಿಮೆ ಪ್ರಕರಣಗಳು ಮತ್ತು ಇತರೆ ಸಿವಿಲ್ ವ್ಯಾಜ್ಯಗಳ ಪ್ರಕರಣಗಳನ್ನು ವಿಲೇವಾರಿ ಮಾಡುವುದರ ಮೂಲಕ ಪರಿಹಾರ ಮೊತ್ತ ಮಂಜೂರು ಮಾಡಲಾಗಿದೆ ಎಂದು ಕಲಬುರಗಿ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಸುವರ್ಣ ತಿಳಿಸಿದ್ದಾರೆ.