Advertisement

ಹೊಸಕೋಟೆ ಪ್ರೌಢಶಾಲೆಗಳಲ್ಲಿ ಇ-ಕಲಿಕೆ ಸೌಲಭ್ಯ

12:39 PM Jul 26, 2018 | Team Udayavani |

ಹೊಸಕೋಟೆ: ತಾಲೂಕಿನಲ್ಲಿರುವ ಎಲ್ಲಾ 19 ಸರ್ಕಾರಿ ಪ್ರೌಢಶಾಲೆಗಳಲ್ಲೂ ಇ-ಕಲಿಕೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ ಹೇಳಿದರು.

Advertisement

 ಪಟ್ಟಣದ ಸರ್ಕಾರಿ ಬಾಲಕರ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಕಿಟ್‌ ವಿತರಿಸಿ ಮಾತನಾಡಿದರು. ಇ-ಕಲಿಕೆ ಕುರಿತು ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದು ಸಂಘ ಸಂಸ್ಥೆಗಳು, ದಾನಿಗಳ ಸಹಯೋಗದಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಒದಗಿಸಲಾಗುವುದು.

ಇದರಿಂದ ವಿದ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಲಿದ್ದು ಸಾಮಾನ್ಯ ಜ್ಞಾನ ವೃದ್ಧಿಗೊಂಡು ಎಸ್‌ಎಸ್‌ಎಲ್‌ಸಿ  ಪರೀಕ್ಷೆ ಉತ್ತಮ ಫ‌ಲಿತಾಂಶಕ್ಕೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಕಲಿಕಾ ಸಾಮರ್ಥ್ಯ ಹೆಚ್ಚಳಗೊಳ್ಳುವುದರೊಂದಿಗೆ ಫ‌ಲಿತಾಂಶವೂ ಸುಧಾರಣೆಗೊಳ್ಳುವ ನಿರೀಕ್ಷೆಯಿದೆ ಎಂದರು. 

ಬೆಂಗಳೂರಿನ ರೀಚಿಂಗ್‌ ಹ್ಯಾಂಡ್‌ ಸಂಸ್ಥೆ ನಿರ್ದೇಶಕ ಮೋಹನ್‌ಪ್ರಭು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಅಗತ್ಯ ಸೌಲಭ್ಯ ಕಲ್ಪಿಸಲು ಸಂಸ್ಥೆ ಬದ್ಧವಾಗಿದೆ.

ಸಂಸ್ಥೆ ಕಳೆದ 5-6 ವರ್ಷಗಳಿಂದ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೌಚಾಲಯ, ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದ್ದು ಗಣಕಯಂತ್ರಗಳನ್ನೂ ಕೊಡುಗೆಯಾಗಿ ನೀಡಿ ತರಬೇತಿಗೆ ಶಿಕ್ಷಕರನ್ನು ನಿಯೋಜಿಸಿದೆೆ.  

Advertisement

ಪ್ರಸ್ತುತ ಸೋಲಾರ್‌ ಶಕ್ತಿಯಿಂದ ಉಪಯೋಗಿಸಬಹುದಾದ ಸ್ಮಾರ್ಟ್‌ ಕ್ಲಾಸ್‌ ಕಿಟ್‌ ನೀಡುತ್ತಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಇಂತಹ ವ್ಯವಸ್ಥೆಯನ್ನು ತಾಲೂಕಿನ 5 ಪ್ರೌಢಶಾಲೆಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. 

ಮುಖ್ಯ ಶಿಕ್ಷಕಿ ಶಾಂತಕುಮಾರಿ, ಸ್ಮಾರ್ಟ್‌ ಕ್ಲಾಸ್‌ ಪರಿಕಲ್ಪನೆ ಪರಿಣಾಮಕಾರಿಯಾಗಿದೆ. ಸಂಘ-ಸಂಸ್ಥೆಗಳು, ದಾನಿಗಳು ನೀಡುವ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ರೀಚಿಂಗ್‌ ಹ್ಯಾಂಡ್‌ ಸಂಸ್ಥೆಯ ಸಿಇಒ ಅಕ್ಷಯ್‌ ಸಾಗರ್‌, ಸದಸ್ಯೆ ಶ್ವೇತಾ, ಆಟೋಡೆಸ್ಕ್ ಸಂಸ್ಥೆಯ ಶ್ರೇಯಾ, ಶಿವರಾಮಯ್ಯ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next