ಪುತ್ತೂರು: ಪಡಿತರ ಚೀಟಿಯ ಇ-ಕೆವೈಸಿ ಅಥವಾ ಆಧಾರ್ ದೃಢೀಕರಣ ಕಡ್ಡಾಯವಾಗಿದ್ದು ಆ.10 ರೊಳಗೆ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು, ಕಡಬ, ಸುಳ್ಯ ತಾಲೂಕಿನ ಪಡಿತರ ಅಂಗಡಿಗಳಲ್ಲಿ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ.
ಆ.1 ರಿಂದ ಆ.10 ರೊಳಗಿನ ಹತ್ತು ದಿನಗಳ ಅವ ಧಿಯಲ್ಲಿ ಆಧಾರ್ ದೃಢೀಕರಣ ಮಾಡಬೇಕು. ಇ-ಕೆವೈಸಿ ಮಾಡದೆ ಇರುವ ಪಡಿತರದಾರರಿಗೆ ಆ ಬಳಿಕ ಪಡಿತರ ಹಂಚಿಕೆ ಸ್ಥಗಿತಗೊಳ್ಳಲಿದೆ. ಹಾಗಾಗಿ ಪಡಿತರ ಫಲಾನುಭವಿಗಳು ದೃಢೀಕರಣಕ್ಕೆ ಆಸಕ್ತಿ ತೋರಿದ್ದಾರೆ. ದೃಢೀಕರಣಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ.
ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋ ದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಬೇಕು. ಇ-ಕೆವೈಸಿ ನೀಡುವಾಗ ಜಾತಿಪತ್ರದ ದೃಢಪತ್ರದ ಪ್ರತಿ, ಅನಿಲ ಸಂಪರ್ಕದ ವಿವರ ಮತ್ತು ಆಧಾರ್ ಸಂಖ್ಯೆಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಇ-ಕೆವೈಸಿ ಪದ್ಧತಿಯು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಮೂಲಕ ಲಭ್ಯವಿರುತ್ತದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಕೆಲವು ಸದಸ್ಯರು ವಿದೇಶದಲ್ಲಿದ್ದರೆ, ಅಥವಾ ನಿಧನರಾಗಿದ್ದರೆ ಅಂತಹ ಹೆಸರನ್ನು ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಅಸಾಧ್ಯವಾಗುತ್ತದೆ ಮತ್ತು ಅಂತಹ ಕಾರ್ಡ್‌ಗಳಿಗೆ ಪಡಿತರ ಸಾಮಗ್ರಿ ಕಡಿತವಾಗಲಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಇಲಾಖೆ ಮೂಲಕವೇ ಇ- ಕೆವೈಸಿ ಪದ್ಧತಿಯನ್ನು ದಾಖಲು ಮಾಡ ಲಾಗುತ್ತದೆ. ಹಾಗಾಗಿ ಕುಟುಂಬ ಸದಸ್ಯರು ಪ್ರತ್ಯೇಕವಾಗಿ ಆಹಾರ ಇಲಾಖೆಗೆ ಭೇಟಿ ನೀಡಬೇಕಿಲ್ಲ. ಕೆವೈಸಿ ಮಾಡಲು ಕುಟುಂಬದ ಪ್ರತಿಯೊಂದು ಸದಸ್ಯರು ಹಾಜ ರಾಗಬೇಕು ಹಾಗೂ ಆಧಾರ್ ಬೆರಳಚ್ಚು (ಬಯೋಮೆಟ್ರಿಕ್) ಅಪ್‌ಡೇಟ್ ಆಗಿರಬೇಕು. ಆಧಾರ್ ಅಪ್‌ಡೇಟ್ ಆಗದಿದ್ದರೆ ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಆಗುವುದಿಲ್ಲ. ಆಗಲಿಲ್ಲ ಎಂದಾದರೆ ಆಧಾರ್ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ಮತ್ತೆ ಮಾಡಿ ಬಳಿಕ ಆ ಆಧಾರ್ ಅಪ್ಡೆàಟ್ ಆದ ನಂತರ ಮತ್ತೆ ಪಡಿತರ ಅಂಗಡಿಗೆ ಬಂದು ಇ-ಕೆವೈಸಿ ಮಾಡಬಹುದು.
ಹೊಸದಾಗಿ ಅಂಚೆ ಮೂಲಕ ಪಡಿತರ ಚೀಟಿ ಪಡೆದವರು ಹಾಗೂ ಈಗಾಗಲೇ ಇ-ಕೆವೈಸಿ ಆಗಿರುವ ಕಾರ್ಡುದಾರರು ಮತ್ತೂಮ್ಮೆ ಇ-ಕೆವೈಸಿ ಮಾಡುವ ಅಗತ್ಯ ಇರುವುದಿಲ್ಲ. ಸಂಪೂರ್ಣ ಇ-ಕೆವೈಸಿ ಆಗಿದೆಯೇ-ಇಲ್ಲವೇ ತಿಳಿಯಲು ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ಮಾಹಿತಿ ಪಡೆದು ಕೊಳ್ಳಬಹುದು.
ಮಹಿಳೆ ಹೆಸರಿಗೆ ವರ್ಗ :
ಕೆವೈಸಿ ಮಾಡಿದ ಬಳಿಕ ಪಡಿತರ ಚೀಟಿಯಲ್ಲಿನ ಹಳೆಯ ಫೋಟೋ ಆಧಾರ್ ಕಾರ್ಡ್‌ನಲ್ಲಿರುವ ಫೋಟೋಗೆ ಬದಲಾಗುವುದು ಹಾಗೂ ಪಡಿತರ ಚೀಟಿಯ ಮುಖ್ಯಸ್ಥ ಪುರುಷರಾಗಿದ್ದಲ್ಲಿ ಇ-ಕೆವೈಸಿ ಮಾಡಿದ ಬಳಿಕ ಮಹಿಳೆಗೆ ವರ್ಗಾವಣೆಗೊಳ್ಳುತ್ತದೆ. ಮಹಿಳೆ ಇಲ್ಲದ ಪಡಿತರ ಚೀಟಿಗೆ ಮಾತ್ರ ಪುರುಷ ಮುಖ್ಯಸ್ಥನಾಗಿರುತ್ತಾನೆ.