Advertisement

ಇ- ಡಿಸೈನರ್‌ ಆದರೆ ಕೈತುಂಬಾ ಕಾಸು, ಇರೋದಿಲ್ಲ ಲಾಸು!

03:45 AM Jul 04, 2017 | Team Udayavani |

ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರೆ ಒಳಗೆ ಅಶರೀರವಾಣಿಯಂತೆ ಕೇಳಿ ಬರುವ ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ‘ಬಾಗಿಲುಗಳು ಮುಚ್ಚುವ ಮತ್ತು ತೆರೆಯುವ ಮುನ್ನ ಅಂತರದ ಬಗ್ಗೆ ಗಮನವಿರಲಿ’, “ಬಾಗಿಲುಗಳು ಈಗ ಎಡಕ್ಕೆ ತೆರೆಯುತ್ತವೆ’… ಇಂಥಾ ಅನೇಕ ಸೂಚನೆಗಳು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುತ್ತವೆ. ಇಂಥಾ ಅಶರೀರವಾಣಿಗಳನ್ನು ಅನೇಕ ಕಡೆಗಳಲ್ಲಿ ಕೇಳಬಹುದು. ಮೊಬೈಲಿನಲ್ಲಿ ಕೇಳಿಬರುವ “ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’ ಸಂದೇಶ, ಸ್ವಿಚ್‌xಆಫ್ ಸಂದೇಶಗಳೂ ಅಶರೀರವಾಣಿಗಳೇ. ಇಂಥಾ ಅಶರೀರವಾಣಿಗಳನ್ನು ಯಾರೋ ಕೂತು ನಿಯಂತ್ರಿಸುತ್ತಿದ್ದಾರೆ ಅಂತ ಅನ್ನಿಸಿದರೂ ಅವೆಲ್ಲವೂ ಕಂಪ್ಯೂಟರ್‌ ಪ್ರೋಗ್ರಾಮುಗಳು. ಈ ಪ್ರೋಗ್ರಾಮುಗಳನ್ನು ರೂಪಿಸುವ ತಂತ್ರಜ್ಞರು ನೀವಾಗಬೇಕೆ? ಹಾಗಾದರೆ ಇಂಟರ್ಯಾಕ್ಷನ್‌ ಡಿಸೈನಿಂಗ್‌ ಕಲಿಯಿರಿ.

Advertisement

ಇದು ಮಾಹಿತಿ ತಂತ್ರಜ್ಞಾನ ಯುಗ. ಮಾಹಿತಿಯೆಲ್ಲವೂ ತಂತ್ರಜ್ಞಾನದ ಮೂಲಕವೇ ಜನರನ್ನು ತಲುಪುತ್ತಿವೆ. ಒಂದು ವಸ್ತುವನ್ನು ಕೊಂಡುಕೊಳ್ಳುವುದರಿಂದ ಹಿಡಿದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರೆಗೂ, ತಾಂತ್ರಿಕ ಉಪಕರಣಗಳಾದ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ… ಇತ್ಯಾದಿಗಳ ಬಳಕೆ ಅನಿವಾರ್ಯವಾಗಿದೆ. 

ಇಂಟರ್ಯಾಕ್ಷನ್‌ ಡಿಸೈನರ್‌ ಎಂದರೆ ಯಾರು?
ಧ್ವನಿ, ಚಿತ್ರ, ಬರಹ, ಗ್ರಾಫಿಕÕ… ಬಳಸಿ  ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ ನಂಥ ಎಲೆಕ್ಟ್ರಾನಿಕ್‌ ಉಪಕರಣಗಳ ಮೂಲಕ ವ್ಯವಹಾರ ನಡೆಸುವ ಪ್ರೋಗ್ರಾಮುಗಳನ್ನು ವಿನ್ಯಾಸಗೊಳಿಸುವವರನ್ನು ಇಂಟರ್ಯಾಕ್ಷನ್‌ ಡಿಸೈನರ್‌(ಇ- ಡಿಸೈನರ್‌) ಎನ್ನಬಹುದು. ತಂತ್ರಜ್ಞಾನದ ಬಳಕೆಯಿಂದಲೇ ನಡೆಯುವ ವ್ಯವಹಾರಗಳನ್ನು ವ್ಯವಸ್ಥಿತವಾಗಿ ಗ್ರಾಹಕರ ಅಥವಾ ಬಳಕೆದಾರನ ಗಮನ ಸೆಳೆದು ಉತ್ಪನ್ನ, ಸರಕು, ಸೇವೆಗಳ ಬಗ್ಗೆ ವಿವರಿಸಿ ವಸ್ತುಗಳನ್ನು ಕೊಳ್ಳುವಂತೆ ಮಾಡುವ ತಂತ್ರಜ್ಞಾನ ವಿಶಾಲವಾಗಿದೆ. ಈ ರೀತಿಯ ಸಂವಹನ ತಂತ್ರಜ್ಞಾನವನ್ನು ರೂಪಿಸುವವರು ಇಂಟರ್ಯಾಕ್ಷನ್‌ ಡಿಸೈನರ್‌ಗಳು.

ಇ- ಡಿಸೈನರ್‌ ಆಗುವುದು ಹೇಗೆ?
ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಪಿಯುಸಿಯಲ್ಲಿ ಕಂಪ್ಯೂಟರ್‌ ವಿಷಯವನ್ನು ಐಚ್ಚಿಕ ವಿಷಯವಾಗಿ ಆರಿಸಿಕೊಳ್ಳಬೇಕು. ನಂತರ ಎಂಜಿನಿಯರಿಂಗ್‌ನಲ್ಲೂ ಕಂಪ್ಯೂಟರ್‌ ಸೈನ್ಸ್‌ ಆರಿಸಿಕೊಂಡರೆ ಒಳಿತು. ಇಲ್ಲದಿದ್ದರೆ ಮುಂದೆ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್‌ ಕೋರ್ಸ್‌ ಮಾಡಬೇಕು. ಜೊತೆಗೆ ಮಲ್ಟಿ ಮೀಡಿಯಾ, ಕಮ್ಯೂನಿಕೇಷನ್‌(ವಿಶೇಷವಾಗಿ ಯುಐ, ಯು ಎಕÕ…) ಡಿಸೈನಿಂಗ್‌ ಕೋರ್ಸ್‌ಗಳನ್ನು ಮಾಡಿದರೆ ಅನುಕೂಲ. 

ಇ-ನೈಪುಣ್ಯತೆಯಿರಲಿ
ಕಂಪ್ಯೂಟರಿನ ಬಗ್ಗೆ ಅಪರಿಮಿತ ಜ್ಞಾನ, ಸಾಫ್ಟ್ವೇರ್‌ ಮತ್ತು ಹಾರ್ಡ್‌ವೇರ್‌ ಬಗ್ಗೆ ಅರಿವು.
ಮೊಬೈಲ್‌ ಅಪ್ಲಿಕೇಷನ್‌ಗಳು, ಇಂಟರ್ಯಾಕ್ಟಿವ್‌ ಗೇಮಿಂಗ್‌, ಲರ್ನಿಂಗ್‌ ಅಪ್ಲಿಕೇಷನ್‌ಗಳ ಬಗ್ಗೆ ಜ್ಞಾನ ಕಂಪ್ಯೂಟರ್‌ ಭಾಷೆಯನ್ನು ಬಳಕೆದಾರನ ಭಾಷೆ ಜೊತೆಗೆ ಮಿಳಿತಗೊಳಿಸುವ ನೈಪುಣ್ಯತೆ.
ಟೆಕ್ನಾಲಜಿ ಬಳಕೆ, ಮಿತಿ, ಪ್ರಾಮುಖ್ಯತೆ, ಪರಿಣಾಮಗಳ ಬಗ್ಗೆ ಅರಿವು

Advertisement

ಪ್ರೋಗ್ರಾಮಿಂಗ್‌ ಜ್ಞಾನ
ಬಳಕೆದಾರನ ಮೇಲಾಗುವ ಪರಿಣಾಮದ ಬಗ್ಗೆ ಜ್ಞಾನ.
ತಾಂತ್ರಿಕ ದೋಷ, ಲೋಪ ಮುಂತಾದ ಅಪಾಯವನ್ನು ಶೀಘ್ರವಾಗಿ ಪರಿಹರಿಸುವ ನೈಪುಣ್ಯತೆ

ಎಲ್ಲೆಲ್ಲಿ ಅವಕಾಶ?
ಸಾಫ್ಟ್ವೇರ್ ಕಂಪನಿ
ಐಟಿ ಮತ್ತು ಐಟಿಇಎಸ್‌ ಕ್ಷೇತ್ರ 
ಮೊಬೈಲ್‌ ಮತ್ತು ಕಂಪ್ಯೂಟರ್‌ ಅಪ್ಲಿಕೇಷನ್‌ ತಯಾರಿಕೆಯಲ್ಲಿ ಅವಕಾಶ
ಅಂತರ್ಜಾಲ ಮತ್ತು ಮೊಬೈಲ್‌ ವಿನ್ಯಾಸ ಕ್ಷೇತ್ರ 
ಅಂತರ್ಜಾಲ ವ್ಯಾಪಾರ, ವ್ಯವಹಾರ ಕ್ಷೇತ್ರ

ಸಂಬಳ ಸಾರಿಗೆ
ಇಂಟರ್ಯಾಕ್ಷನ್‌ ಡಿಸೈನರ್‌ಗಳಿಗೆ ಅವರ ಅನುಭವ ಮತ್ತು ಕೌಶಲ್ಯಕ್ಕನುಗುಣವಾಗಿ ವಾರ್ಷಿಕವಾಗಿ 4 ಲಕ್ಷದಿಂದ 12 ಲಕ್ಷದವರೆಗೆ ಸಂಬಳ ಸಿಗುತ್ತದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಉಚಿತ ಸಾರಿಗೆ ಸೌಲಭ್ಯ, ವಿಶೇಷ ಸವಲತ್ತುಗಳೂ ಸಹ ಸಿಗುವುದುಂಟು.

ಕಾಲೇಜುಗಳು
ವೆಗ್ಯೂ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್‌ ಟೆಕ್ನಾಲಜಿ, ಬೆಂಗಳೂರು
ಅರೆನಾ ಅನಿಮೇಷನ್‌, ಜಯನಗರ, ಬೆಂಗಳೂರು
ಪೆರೆಲ… ಅಕಾಡೆಮಿ, ಅಂಧೇರಿ ಈಸ್ಟ್‌. ಮುಂಬೈ, ದೆಹಲಿ, ನೊಯಿಡಾ (ಶಾಖೆಗಳು)
ಡಿಸೈನ್‌ ಮೀಡಿಯಾ ಅಂಡ್‌ ಎಜುಟೈನ್ಮೆಂಟ… ಸೊಲ್ಯೂಷನ್‌, ಪುಣೆ
ಸುಶಾಂತ್‌ ಸ್ಕೂಲ್‌ ಡಿಸೈನ್‌, ಅನ್ಸಲ… ಯೂನಿವರ್ಸಿಟಿ. ಗುರ್‌ಗಾಂವ್‌
ಯುನೈಟೆಡ್‌ ವರ್ಲ್ಡ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್‌, ಅಹಮದಾಬಾದ್‌

– ಎನ್‌. ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next