ನಗ ರ ದಲ್ಲಿ ಶನಿ ವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವ ರು, ಕಾಂಗ್ರೆಸ್ ಸಹಿತ ವಿಪಕ್ಷ ನಾಯಕರ ವಿರುದ್ಧ ಇ.ಡಿ. ದಾಳಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಫಲಿತಾಂಶದ ಬಳಿಕ ತನ್ನ ತಪ್ಪಿನ ಅರಿವಾಗಲಿದೆ ಎಂದರು.
ಕಾಂಗ್ರೆಸ್ ಇ.ಡಿ.-ಐ.ಟಿ. ಸಹಿತ ಇತರ ಯಾವುದೇ ದಾಳಿಗಳಿಗೂ ಹೆದರುವುದಿಲ್ಲ. ಪಕ್ಷ ಪ್ರಜಾಪ್ರಭುತ್ವದ ನೆಲೆಗಟ್ಟು ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತದೆ ಹಾಗೂ ಅದೇ ರೀತಿಯಲ್ಲಿ ಚುನಾವಣೆಯನ್ನೂ ಎದುರಿಸಲಿದೆ. ಯಾವುದೇ ದಾಳಿ ಮತ್ತು ಅಸ್ತ್ರಗಳಿಗೆ ಹೆದರುವುದಿಲ್ಲ ಎಂದರು.
ಪಂಚರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಈಗಾಗಲೇ ಒಂದು ಹಂತದ ಪ್ರಚಾರ ಕೈಗೊಳ್ಳಲಾಗಿದೆ. ಎಲ್ಲೆಡೆ ಉತ್ತಮ ವಾತಾವರಣವಿದೆ. ಅನೇಕ ಸವಾಲಿನ ನಡುವೆ ಈ ಹಿಂದೆ ಅನೇಕ ಚುನಾವಣೆಯಲ್ಲಿ ಗೆಲುವು ಸಾ ಧಿಸಲಾಗಿದೆ. ಈಗಲೂ ಅಂತಹ ಸಾಧನೆ ತೋರುವ ವಿಶ್ವಾಸವಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿ ಸವಾಲಿನ ನಡುವೆಯೂ ಒಂದು ವರ್ಷ ಯಶಸ್ವಿಯಾಗಿ ಕಾರ್ಯನಿರ್ವ ಹಿ ಸಿ ರು ವು ದಾ ಗಿ ಮಾಧ್ಯಮಗಳೇ ವರದಿ ಮಾಡಿವೆ. ರಾಜಕೀಯ ಜೀವನದುದ್ದಕ್ಕೂ ವಹಿಸಿಕೊಟ್ಟ ಸಚಿವ ಸ್ಥಾನ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸಹಿತ ಹಲವು ಜವಾಬ್ದಾರಿಗಳನ್ನು ಸವಾಲು ಎದುರಿಸಿಯೇ ನಿಭಾಯಿಸಿದ್ದೇನೆ ಎಂದು ಹೇಳಿದರು.
Advertisement