ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬಾಡಿಗೆ ಸೈಕಲ್, ಇ-ಸೈಕಲ್ ಹಾಗೂ ಇ-ಬೈಕ್ ಯೋಜನೆಯನ್ನು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಶಹಾಪುರದ ಶಿವಚರಿತ್ರೆ ಬಳಿ ಸೈಕಲ್ ಗಳನ್ನು ಅವರು ಸಾರ್ವಜನಿಕ ಸೇವೆಗೆ ನೀಡಿದರು. ಬೆಳಗಾವಿಯಲ್ಲಿ ಈ ಬೈಕ್ ಗಳು ಬಾಡಿಗೆ ರೂಪದಲ್ಲಿ ಲಭ್ಯ ಆಗಲಿವೆ. ನಂತರ ಶಾಸಕ ಅಭಯ ಪಾಟೀಲ ಮಾತನಾಡಿ, ಜನರ ಓಡಾಟಕ್ಕಾಗಿ ಅನುಕೂಲವಾಗಲು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಇ ಸೈಕಲ್ ಹಾಗೂ ಇ ಬೈಕ್ ಗಳಿಗಾಗಿ ನಗರದಲ್ಲಿ 20 ಕೇಂದ್ರ ತೆರೆದಿದ್ದೇವೆ. ಯಾನ ಎಂಬ ಕಂಪನಿ ಮೂಲಕ ಸೈಕಲ್ ನೀಡಲಾಗುತ್ತಿದ್ದು, ಸಮಯ ಮತ್ತು ಪರಿಸರ ಉಳಿಸುವ
ಉದ್ದೇಶದಿಂದ ಸಾರ್ವಜನಿಕ ಸೈಕಲ್ ಸೇವೆ ಆರಂಭಿಸಲಾಗಿದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
100 ಇ ಸೈಕಲ್, 100 ಇ ಬೈಕ್ ಹಾಗೂ 100 ಸೆ„ಕಲ್ ಹೀಗೆ 300 ಎಲೆಕ್ಟ್ರಿಕಲ್ ಸೈಕಲ್ ಬೈಕ್ ಹಾಗೂ ಸೈಕಲ್ ಗಳುನ್ನು ನಗರದಲ್ಲಿ 20 ಸ್ಟೇಷನ್ ಮಾಡಿ, ಜನರ ಬಳಕೆಗೆ ಒದಗಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಇವುಗಳಿಗೆ ಬೇಡಿಕೆ ಜಾಸ್ತಿ ಆದರೆ ಇನ್ನು ಹೆಚ್ಚಿನ ಸ್ಟೇಷನ್ ಮಾಡಿ ಹೆಚ್ಚುವರಿ ಸೈಕಲ್ ಹಾಗೂ ಬೈಕ್‌ಗಳನ್ನು ಜನರ ಅನುಕೂಲಕ್ಕಾಗಿ ಒದಗಿಸಲಾಗುವುದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ್ ಬಾಗೇವಾಡಿ, ಸಾರ್ವಜನಿಕರು ಇ ಬೈಕ್ ಹಾಗೂ ಇ ಸೈಕಲ್ ಬಳಕೆ ಮಾಡಬೇಕು. ಇದರಿಂದ ಪರಿಸರ ರಕ್ಷಣೆ ಜೊತೆಗೆ ಸಂಚಾರ ದಟ್ಟಣೆ ತಪ್ಪಿಸಬೇಕು. ಅರ್ಧ ಗಂಟೆಗೆ ಇ ಸೆ„ಕಲ್ ಗಳಿಗೆ 15 ರೂ., ಸೈಕಲ್ ಗಳಿಗೆ 5 ರೂಪಾಯಿ ಹಾಗೂ ಇ ಬೈಕ್ ಗೆ 30 ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯರಾದ ಜಯಂತ ಜಾಧವ, ರಾಜು ಭಾತಖಾಂಡೆ, ಎಇಇ ಬಿ ಎಸ್ ಕಮತೆ, ಶಾಲಿನಿ ಬಿರಾದಾರ ಇತರರಿದ್ದರು.