Advertisement

Arrested: ಇ-ಸಿಗರೇಟ್‌ ಮಾರಾಟ: ಕೇರಳ ಮೂಲದ ಯುವಕ ಸೆರೆ

11:24 AM Jan 31, 2024 | Team Udayavani |

ಬೆಂಗಳೂರು: ವಿದೇಶಗಳಿಂದ ನಿಷೇಧಿತ ಇ-ಸಿಗರೇಟ್‌ ತರಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಶೋಯಿಬ್‌(35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯಿಂದ 3 ಕೋಟಿ ರೂ.ನ 6 ಸಾವಿರ ಇ-ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕೆಲ ವರ್ಷಗಳ ಹಿಂದೆ ದುಬೈಗೆ ಹೋಗಿದ್ದ ಶೋಯಿಬ್‌, ಬಳಿಕ ದೆಹಲಿಗೆ ಬಂದು ನೆಲೆಸಿದ್ದ. ಇತ್ತೀಚೆಗೆ ಬೆಂಗ ಳೂರಿನ ಸದ್ದುಗುಂಟೆಪಾಳ್ಯ ದಲ್ಲಿರುವ ಸಹೋದರನ ಮನೆಯಲ್ಲಿ ವಾಸವಾಗಿದ್ದ. ಯಾವುದೇ ಕೆಲಸಕ್ಕೆ ಹೋಗದ ಆರೋಪಿ, ವಿದೇಶದಲ್ಲಿರುವ ಕೆಲ ವ್ಯಕ್ತಿಗಳ ಸಂಪರ್ಕಿಸಿ, ಕೋರಿಯರ್‌ ಮೂಲಕ ಇ- ಸಿಗರೇಟ್‌ಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಬಾಕ್ಸ್‌ ಗಟ್ಟಲೇ ಬರುತ್ತಿದ್ದ ಇ-ಸಿಗರೇಟ್‌ಗಳನ್ನು ಸಹೋದರನ ಮನೆ ಕೋಣೆಯೊಂದನ್ನು ಗೋಡೌನ್‌ ರೀತಿ ಪರಿವರ್ತಿ ಸಿಕೊಂಡು ಸಂಗ್ರಹಿಸಿಟ್ಟಿದ್ದ. ಬಳಿಕ  ಗ್ರಾಹಕರಿಗೆ ಮಾರುತ್ತಿದ್ದ.  ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next