Advertisement

ಉಪ್ಪಿನಂಗಡಿ: ಇ- ಸಿಗರೇಟ್‌ ವಶ

01:08 AM Feb 27, 2023 | Team Udayavani |

ಉಪ್ಪಿನಂಗಡಿ: ಇಲ್ಲಿನ ಮೊಬೈಲ್‌ ಅಂಗಡಿಗೆ ಶನಿವಾರ ರಾತ್ರಿ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಅನಧಿಕೃತವಾಗಿ ಮಾರಲಾಗುತ್ತಿದ್ದ ಇ- ಸಿಗರೇಟ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಅದರ ಮಾಲಕ ನರಿಮೊಗರು ಗ್ರಾಮದ ಮುಕ್ವೆಯ ಶೇಖ್‌ ಶಾಹಿದ್‌ (27) ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರಲ್ಲದೆ, ಸುಮಾರು 26 ಸಾವಿರ ರೂ. ಮೌಲ್ಯದ ಒಟ್ಟು 52 ಇ- ಸಿಗರೇಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಂಗಡಿಯಲ್ಲಿ ಮಾರಾಟ ಮಾಡಲು ಇರಿಸಿಕೊಂಡಿದ್ದ ವಿವಿಧ ಫ್ಲೇವರ್‌ನ ಒಟ್ಟು 52 ನಿಷೇಧಿತ ಇ-ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪರವಾನಿಗೆ ನವೀಕರಣವಾಗಿಲ್ಲ ಈ ಅಂಗಡಿಯು ಕಾಂಪ್ಲೆಕ್ಸ್‌ನ ಹಿಂಬದಿಯಲ್ಲಿ ಜನ ನಿಬಿಡತೆಯಿಲ್ಲದ ಜಾಗದಲ್ಲಿ ಇದ್ದು, ಮೇಲ್ನೋಟಕ್ಕೆ ಮೊಬೈಲ್‌ ಮಾರಾಟ ಮಳಿಗೆಯಂತೆ ಕಾಣುತ್ತದೆ. ಆದರೆ ಈ ಅಂಗಡಿ ಮೊಬೈಲ್‌ ಮಾರಾಟದ ಪರವಾನಿಗೆಯನ್ನೂ ನವೀಕರಿಸಿರಲಿಲ್ಲ ಎಂಬ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ಉಪ್ಪಿನಂಗಡಿಯಲ್ಲಿ ಕೆಲವೊಂದು ಅಂಗಡಿಗಳು ಪರವಾನಿಗೆಯನ್ನು ನವೀಕರಿಸದೇ ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಗ್ರಾ.ಪಂ. ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next