Advertisement

ಇ-ಬಸ್‌: ನಿತ್ಯ 180 ಕಿ.ಮೀ.ಕ್ರಮಿಸುವ ಸವಾಲು

01:57 PM Aug 18, 2021 | Team Udayavani |

ಬೆಂಗಳೂರು: ಬಹುನಿರೀಕ್ಷಿತ ವಿದ್ಯುತ್‌ ಚಾಲಿತ ಬಸ್‌ಗಳು ಶೀಘ್ರ ರಸ್ತೆಗಿಳಿಯಲಿವೆ. ಆದರೆ,ಅವುಗಳು ನಿತ್ಯ 180 ಕಿ.ಮೀ. ಕಾರ್ಯಾಚರಣೆಗೊಳಿಸುವಂತೆ ಮಾಡುವುದೇ ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಈಗಸವಾಲಾಗಿ ಪರಿಣಮಿಸಿದೆ!

Advertisement

ಕೊರೊನಾ ಹಾವಳಿ ಮತ್ತು ಅದಕ್ಕೆ ಸಂಬಂಧಿಸಿದನಿರ್ಬಂಧಗಳಿ ರುವುದರಿಂದ ನಗರದಲ್ಲಿ ಸಂಚಾರದಟ್ಟಣೆ ಅಷ್ಟಾಗಿ ಇಲ್ಲ. ಜನಜೀವನ ಸಹಜಸ್ಥಿತಿಗೆಮರಳಿದ ನಂತರ ಎಂದಿನ ವಾಹನದಟ್ಟಣೆಮರುಕಳಿಸಲಿದೆ.ಜತೆಗೆ ಪ್ರಯಾಣಿಕರಿಗೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಕಲ್ಪಿಸಲಿರುವ ಇ-ಬಸ್‌ಗಳು ಮೆಟ್ರೋ ನಿಲ್ದಾಣಗಳಿಂದ ಸಂಪರ್ಕ ಸೇವೆಗಳಾಗಿ ಕಾರ್ಯನಿರ್ವಹಿಸಲಿವೆ.

ಹೀಗಾಗಿ, ಮಾರ್ಗಗಳ ಅಂತರ ಕೂಡ 10 ಕಿ.ಮೀ. ಒಳಗೇ ಇರುತ್ತದೆ. ಹೀಗಿರುವಾಗ,ಒಂದು ದಿನದಲ್ಲಿ ಬಸ್‌ಗಳು 180 ಕಿ.ಮೀ.ಕ್ರಮಿಸುವುದು ಸವಾಲಾಗಲಿದೆ.ಎಲ್ಲರಿಗೂ ತಿಳಿದಿರುವಂತೆ ಖಾಸಗಿ ಕಂಪೆನಿಯಿಂದ ಗುತ್ತಿಗೆ ಆಧಾರದಲ್ಲಿ “ಇ-ಬಸ್‌’ಗಳನ್ನುಪಡೆದು ಬಿಎಂಟಿಸಿ ಕಾರ್ಯಾಚರಣೆ ಮಾಡಲಿದ್ದು,ಒಪ್ಪಂದದ ಪ್ರಕಾರ ನಿತ್ಯ ಆ ಕಂಪೆನಿಗೆ ಪ್ರತಿ ಕಿ.ಮೀ.ಗೆ 51 ರೂ.ಗಳಂತೆ 180 ಕಿ.ಮೀ.ಗೆ ಹಣ ಪಾವತಿಸಬೇಕಾಗುತ್ತದೆ. ಬಿಎಂಟಿಸಿಗೆ ಪ್ರತಿ ದಿನ ಕೇವಲ150 ಕಿ.ಮೀ. ಕ್ರಮಿಸಲು ಸಾಧ್ಯವಾದರೂ, 180ಕಿ.ಮೀ. ಲೆಕ್ಕಹಾಕಿಯೇ ಪಾವತಿ ಮಾಡಬೇಕು.

ಒಂದು ವೇಳೆ ಸ್ವಲ್ಪ ವ್ಯತ್ಯಾಸವಾದರೂ ಸಂಸ್ಥೆಗೆ ನಷ್ಟಉಂಟಾಗಲಿದೆ.ಈ ಹಿನ್ನೆಲೆಯಲ್ಲಿ ಇ-ಬಸ್‌ಗಳುಪ್ರತಿದಿನ ನಿಗದಿತ ಗುರಿ ಸಾಧಿಸುವುದು ಅನಿವಾರ್ಯ.ಹಾಗಾಗಿ, ಇದಕ್ಕೆ ಪೂರಕವಾಗಿ ಮಾರ್ಗ ಗಳನ್ನುಸಿದ್ಧಪಡಿಸಿ ಕಾರ್ಯಾಚರಣೆಗೊಳಿಸಬೇಕಿದೆ. ಇದುಬಿಎಂಟಿಸಿ ಅಧಿಕಾರಿಗಳನ್ನು ಚಿಂತೆಗೀಡುಮಾಡಿದೆ.

ಈ ಹಿಂದೆ ಸ್ವತಃ ಬಿಎಂಟಿಸಿ ಮತ್ತು ನಗರ ಮತ್ತುಭೂಸಾರಿಗೆ ನಿರ್ದೇಶನಾಲಯ (ಡಲ್ಟ್)ಸಂಯುಕ್ತವಾಗಿ ನಡೆಸಿದ ಅಧ್ಯಯನದ ಪ್ರಕಾರಬೆಂಗಳೂರಿನಲ್ಲಿ “ವಾಹನ ದಟ್ಟಣೆ ಅವಧಿ’ಯಲ್ಲಿಬಸ್‌ಗಳ ವೇಗ ಗಂಟೆಗೆ 8ರಿಂದ 10 ಕಿ.ಮೀ. ಇನ್ನುದಟ್ಟಣೆ ಅಲ್ಲದ ಅವಧಿಯಲ್ಲಿ ಅಂದಾಜು 10-14ಕಿ.ಮೀ. ಹೀಗಿರುವಾಗ, ನಿರಂತರ 10ರಿಂದ 12ಗಂಟೆ ಇ-ಬಸ್‌ಗಳು ಕಾರ್ಯಾಚರಣೆಮಾಡಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಪ್ರಯಾಣಿಕರದಟ್ಟಣೆ ಇರಬೇಕು. ಆಗ, ಕಲೆಕ್ಷನ್‌ ಕೂಡಉತ್ತಮವಾಗಿರುತ್ತದೆ.

Advertisement

ಅದೇ ರೀತಿ, ಗುಣಮಟ್ಟದರಸ್ತೆಗಳೂ ಇರಬೇಕಾಗುತ್ತದೆ.8-10 ದಿನಗಳಲ್ಲಿ ಮಾರ್ಗ ಅಂತಿಮ: ಜತೆಗೆ180ಕಿ.ಮೀ. ಕಾರ್ಯಾಚರಣೆಗೆ ಎರಡು ಬಾರಿಚಾರ್ಜ್‌ ಮಾಡಬೇಕಾಗುತ್ತದೆ. ಒಮ್ಮೆ ಚಾರ್ಜ್‌ಮಾಡಲು ಒಂದು ಬಸ್‌ 45 ನಿಮಿಷತೆಗೆದುಕೊಳ್ಳುತ್ತದೆ. ಆ ಚಾರ್ಜಿಂಗ್‌ ಸ್ಟೇಷನ್‌ ಎಲ್ಲಿಇರಬೇಕು? ಯಾವ ಸಮಯದಲ್ಲಿ ಚಾರ್ಜಿಂಗ್‌ಗೆಅವಕಾಶ ಕಲ್ಪಿಸಬೇಕು? ಒಮ್ಮೆಲೆ ಆ ಸ್ಟೇಷನ್‌ಗಳಲ್ಲಿಬಸ್‌ಗಳ ದಟ್ಟಣೆ ಹಾಗೂ ಪ್ರಯಾಣಿಕರಿಗೆತೊಂದರೆ ಆಗದಂತೆ ನೋಡಿಕೊಳ್ಳಬೇಕು.ನಾವು ಕಾರ್ಯಾಚರಣೆ ಮಾಡುವ ಮಾರ್ಗಗಳಿಗೆ ಹತ್ತಿರ ಆಗಿರಬೇಕು.

ಈ ಎಲ್ಲ ಅಂಶಗಳುಸದ್ಯಕ್ಕೆ ಸವಾಲು. ಇವುಗಳನ್ನು ಗಮನದಲ್ಲಿಟ್ಟುಕೊಂಡು8-10ದಿನಗಳಲ್ಲಿ ಇ-ಬಸ್‌ಮಾರ್ಗಗಳನ್ನುಅಂತಿಮಗೊಳಿಸಲಾಗುವುದು ಎಂದು ಬಿಎಂಟಿಸಿಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.ಎಲ್ಲ 90 ನಾನ್‌ಎಸಿ ಇ-ಬಸ್‌ಗಳು ಒಮ್ಮೆಲೆರಸ್ತೆಗಿಳಿಯುವುದಿಲ್ಲ. ಹಂತ-ಹಂತವಾಗಿ ಬರಲಿವೆ.ಈ ಪೈಕಿ ಮುಂದೊಂದು ತಿಂಗಳಲ್ಲಿ ಒಂದು ಬಸ್‌ಕಾರ್ಯಾರಂಭ ಮಾಡಲಿದೆ. ಈ ಅವಧಿಯಲ್ಲಿಇದರ ಎಂಜಿನ್‌ ಪ್ರಮಾಣೀಕರಣ ಸೇರಿದಂತೆಹಲವು ತಾಂತ್ರಿಕ ಅನುಮತಿಗಳನ್ನು ಪಡೆಯಬೇಕಾಗುತ್ತದೆ. ಯಾವುದಾದರೂ ಸಣ್ಣ-ಪುಟ್ಟಬದಲಾವಣೆಗಳಿದ್ದರೆ, ಅವುಗಳನ್ನು ಕಂಪೆನಿಗಮನಕ್ಕೆ ತರಲಾಗುವುದು. ನಂತರ ಬರುವ ಬಸ್‌ಗಳಿಗೆಅದುಯಥಾವತ್ತಾಗಿಅನ್ವಯಿಸಲಾಗುವುದುಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next