Advertisement

E-Bike Taxi: ಇ-ಬೈಕ್‌ ಟ್ಯಾಕ್ಸಿ ಸೇವೆ ರದ್ದಾಗಿದ್ದರೂ ಕಾರ್ಯಾಚರಣೆ

10:06 AM Mar 12, 2024 | Team Udayavani |

ಬೆಂಗಳೂರು: ಇ-ಬೈಕ್‌ ಟ್ಯಾಕ್ಸಿ ಸೇವೆ ರದ್ದುಗೊಳಿಸಿ ದ್ದರೂ ಬೆಂಗಳೂರು ಮತ್ತು ಮೈಸೂರಿನಲ್ಲಿ ಬೈಕ್‌ ಟ್ಯಾಕ್ಸಿಗಳ ಹಾವಳಿಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ. ಇದರಿಂದ ಎಂದಿನಂತೆ ಕಾರ್ಯಾಚರಣೆ ಮುಂದುವರಿದಿದೆ. 2021ರಲ್ಲಿ ಬೈಕ್‌ ಟ್ಯಾಕ್ಸಿ ಯೋಜನೆ ಜಾರಿಗೊಳಿಸಲಾಗಿತ್ತು. ಈ ಆದೇಶವನ್ನು ಕಳೆದ ವಾರವಷ್ಟೇ ವಾಪಸ್‌ ಪಡೆದಿತ್ತು.

Advertisement

ಅದರೊಂದಿಗೆ ನಗರದಲ್ಲಿ ಇ-ಬೈಕ್‌ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಲಾಗಿತ್ತು. ಇನ್ನು ಸಾಮಾನ್ಯ ಬೈಕ್‌ ಟ್ಯಾಕ್ಸಿಗಳಿಗಂತೂ ಅನುಮತಿಯನ್ನೇ ನೀಡಿಲ್ಲ. ಹಾಗಾಗಿ, ಆದೇಶ ಹಿಂಪಡೆಯುವ ಪ್ರಶ್ನೆಯೇ ಬರುವು ದಿ ಲ್ಲ ಎಂಬ ವಾದ ಸಾರಿಗೆ ಇಲಾಖೆ ಅಧಿಕಾರಿ ಗಳ ದ್ದಾಗಿದೆ. ಈ ಮಧ್ಯೆಯೂ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗಳು ಬುಕಿಂಗ್‌ ಮಾಡುತ್ತಿದ್ದಂತೆ ಬಂದು ನಿಲ್ಲುತ್ತಿವೆ. “ಬೆಂಗಳೂರು ಮತ್ತು ಮೈಸೂರು ಎರಡೂ ಕಡೆ ಈ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆಗಳು ಈಗಲೂ ಅಬಾಧಿತವಾಗಿವೆ. ರದ್ದುಗೊಳಿಸಿದ್ದರಿಂದ ಯಾವುದೇ ವ್ಯತ್ಯಾಸ ಆಗಿಲ್ಲ. ಹೀಗಿರುವಾಗ ಆದೇಶ ವಾಪಸ್‌ ತೆಗೆದುಕೊಂಡಿ ದ್ದರ ಉದ್ದೇಶವೂ ಸಾಕಾರಗೊಂಡಂತಾಗಿಲ್ಲ’ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

“ಗಾಯತ್ರಿನಗರದಿಂದ ರಿಚ್‌ಮಂಡ್‌ ವೃತ್ತದವರೆಗೆ ಬೈಕ್‌ ಟ್ಯಾಕ್ಸಿಯಲ್ಲೇ ಬಂದೆ. ಈ ಹಿಂದೆ ಕೆಲವು ಸಲ ಬುಕಿಂಗ್‌ ಮಾಡಿದಾಗ, ಎಲೆಕ್ಟ್ರಿಕ್‌ ಬೈಕ್‌ ಬರುತ್ತಿತ್ತು. ಸೋಮವಾರ ಮಾತ್ರ ಉಬರ್‌ನಲ್ಲಿ ಬೈಕ್‌ ಟ್ಯಾಕ್ಸಿ ಬುಕಿಂಗ್‌ ಮಾಡಿದಾಗ, ಸಾಮಾನ್ಯ ಬೈಕ್‌ ಬಂದಿತ್ತು. ಇ-ಬೈಕ್‌ ಟ್ಯಾಕ್ಸಿ ಸೇವೆ ರದ್ದತಿಯಿಂದ ಯಾವುದೇ ವ್ಯತ್ಯಯ ಅಥವಾ ವ್ಯತ್ಯಾಸ ಆಗಿಲ್ಲ’ ಎಂದು ಗ್ರಾಹಕ ಉಮೇಶ್‌ ತಿಳಿಸಿದರು.

ಹಿನ್ನೆಲೆ: ಬೈಕ್‌ ಟ್ಯಾಕ್ಸಿ ಯೋಜನೆ ಹೆಸರಿನಲ್ಲಿ ದುರುಪಯೋಗ ಆಗುತ್ತಿದೆ ಎಂಬ ಕಾರಣಕ್ಕೆ ಯೋಜನೆ ರದ್ದುಗೊಳಿಸಿ ಈಚೆಗೆ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಕೆಲವು ಖಾಸಗಿ ಆ್ಯಪ್‌ ಆಧಾರಿತ ಸಂಸ್ಥೆಗಳು, ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸುತ್ತಿವೆ. ವಿಶೇಷವಾಗಿ ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿದೆ.

ಇದು ಸಾರಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಆದೇಶದಲ್ಲಿ ಹೇಳಿತ್ತು. ಇದಲ್ಲದೆ, 2021ರಲ್ಲಿ ಜಾರಿಗೊಳಿಸಲಾದ ಬೈಕ್‌ ಟ್ಯಾಕ್ಸಿ ಯೋಜನೆಯು ಆರಂಭದಿಂದಲೂ ಆಟೋ, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಚಾಲಕರು ಮತ್ತು ಬೈಕ್‌ ಟ್ಯಾಕ್ಸಿ ನಡುವೆ ಸಂಘರ್ಷಗಳಿಗೂ ಎಡೆಮಾಡಿಕೊಡುತ್ತಿದೆ. ಈ ಸಂಬಂಧ ಹಲವು ಪ್ರಕರಣಗಳು ಕೂಡ ದಾಖಲಾಗಿವೆ. ಜತೆಗೆ ಬೈಕ್‌ ಟ್ಯಾಕ್ಸಿಯು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದನ್ನು ಕೂಡ ಇಲಾಖೆ ಗಮನಿಸುವುದರ ಜತೆಗೆ ಆದೇಶದಲ್ಲಿ ಉಲ್ಲೇಖೀಸಿತು.

Advertisement

ಇ-ಬೈಕ್‌ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಲಾಗಿದೆ. ಬೈಕ್‌ ಟ್ಯಾಕ್ಸಿಗೆ ನಾವು ಅನುಮತಿ ನೀಡಿರಲೇ ಇಲ್ಲ. ಆದರೆ, ಸಾಮಾನ್ಯ ಬೈಕ್‌ ಟ್ಯಾಕ್ಸಿಗಳ ಸೇವೆಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಪ್ರತಿಕ್ರಿಯಿಸಲು ಬರುವುದಿಲ್ಲ. ಎನ್‌.ವಿ. ಪ್ರಸಾದ್‌, ಕಾರ್ಯದರ್ಶಿ, ಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next