Advertisement

19ರಂದು ಇ-ಲೋಕ್‌ ಅದಾಲತ್‌

04:36 PM Sep 07, 2020 | Suhan S |

ಬೀದರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.19ರಂದು ಜಿಲ್ಲೆಯಲ್ಲಿ ಇ-ಲೋಕ್‌ ಅದಾಲತ್‌ ನಿಗದಿಗೊಳಿಸಲಾಗಿದ್ದು, ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರ ಸತ್ಯನಾರಾಯಣಾಚಾರ್ಯ ತಿಳಿಸಿದ್ದಾರೆ.

Advertisement

ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕಾಗಿ 1646 ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನು ಸಹ ಸಮಯಾವಕಾಶ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಗುರುತಿಸಲಾಗುವುದು. ಆದ್ದರಿಂದ ಇ-ಲೋಕ್‌ ಅದಾಲತ್‌ನಲ್ಲಿ ಕಕ್ಷಿದಾರರು, ವಕೀಲರು, ಸಾರ್ವಜನಿಕರು, ಅಧಿಕಾರಿಗಳು, ಬ್ಯಾಂಕ್‌ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇ-ಲೋಕ್‌ ಅದಾಲತ್‌ ಲಾಭ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ವ್ಯಾಜ್ಯವನ್ನು ಲೋಕ್‌ ಅದಾಲತ್‌ ಮೂಲಕ ಯಾವುದೇ ಖರ್ಚಿಲ್ಲದೆ, ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇಲ್ಲಿ ಯಾವುದೇ ಕೋರ್ಟ್‌ ಫೀಸ್‌ ಕೊಡಬೇಕಾಗಿಲ್ಲ. ಇಲ್ಲಿ ನೀವೇ ನೇರವಾಗಿ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ನಿಮಗೆ ತೃಪ್ತಿಯಾದಲ್ಲಿ ಮಾತ್ರ ನೀವು ರಾಜಿ ಮಾಡಿಕೊಳ್ಳಬಹುದು. ಸಿವಿಲ್‌ ಪ್ರಕರಣ ಇತ್ಯರ್ಥಗೊಂಡರೆ ಅವಾರ್ಡ್‌ ಮಾಡಲಾಗುವುದು. ಅದು ಸಾಮಾನ್ಯ ಡಿಕ್ರಿಯಷ್ಟೇ ಮಹತ್ವ ಪಡೆದುಕೊಂಡಿರುತ್ತದೆ. ನೀವು ಪ್ರಕರಣ ರಾಜಿ ಮಾಡಿಕೊಂಡಲ್ಲಿ ಶೇ. 100ರಷ್ಟು ನ್ಯಾಯಾಲಯದ ಶುಲ್ಕ ವಾಪಸ್‌ ನೀಡಲಾಗುವುದು. ಅದಾಲತ್‌ ಅವಾರ್ಡ್‌ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಹೀಗಾಗಿ ಪ್ರಕರಣ ಅಂತಿಮವಾಗಿ ಪರಿಹಾರಗೊಂಡಂತೆ ಆಗುತ್ತದೆ. ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ಈಗಾಗಲೇ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳನ್ನು ಮುಖ್ಯವಾಗಿ ಇ-ಲೋಕ್‌ ಅದಾಲತ್‌ ನಲ್ಲಿ ರಾಜಿ ಸಂಧಾನಕ್ಕೆ ತೆಗೆದುಕೊಳ್ಳಲಾಗುತ್ತದೆ. ಲೋಕ್‌  ಅದಾಲತ್‌ ಬಗ್ಗೆ ಯಾವುದಾದರೂ ಗೊಂದಲ ಅಥವಾಅನುಮಾನಗಳಿದ್ದಲ್ಲಿ ಪ್ರಾ ಧಿಕಾರಕ್ಕೆ ಸಂಪರ್ಕಿಸಬಹುದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next