ಚಿಕ್ಕಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಮೆಗಾ ಇ-ಲೋಕ ಅದಾಲತ್‌ನಲ್ಲಿ ಒಟ್ಟು 623 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮೂಲಕಇತ್ಯರ್ಥಪಡಿಸಲಾಗಿದೆ.
ರಸ್ತೆ ಅಪಘಾತ, ಚೆಕ್‌ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟಒಳಗೊಂಡಂತೆ ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ಜಿಲ್ಲೆಯಎಲ್ಲ ತಾಲೂಕುಗಳ ನ್ಯಾಯಾಲಯ ಗಳಲ್ಲಿ ಬೆಳಗ್ಗೆ 10:30ರಿಂದ ಸಂಜೆ 5 ಗಂಟೆ ವರೆಗೆ ಅದಾಲತ್ ನಡೆಯಿತು. ಕೆಲ ಅರ್ಜಿದಾರರು ವಕೀಲರ ಜತೆ ಅದಾಲತ್‌ನಲ್ಲಿ ಭಾಗ ವಹಿಸಿದ್ದರು.ನಗರದಜಿಲ್ಲಾನ್ಯಾಯಾಲಯದಲ್ಲಿ ಸರದಿಯಲ್ಲಿ ಅರ್ಜಿದಾರರ ಪ್ರಕರಣಗಳ ಇತ್ಯರ್ಥ ನಡೆಯಿತು.
ಇ-ಲೋಕ ಅದಾಲತ್‌ನಲ್ಲಿ ವಾದಿ-ಪ್ರತಿವಾದಿಗಳು ಮತ್ತು ವಕೀಲರು ತಮ್ಮ ಕಚೇರಿಯಿಂದ ಅಥವಾ ಮನೆಯಿಂದ ಮೊಬೈಲ್ ಅಥವಾ ಇನ್ನಿತರ ವಿದ್ಯುನ್ಮಾನ ಯಂತ್ರಗಳ ಮೂಲಕ ಭಾಗವಹಿಸಬಹುದು. ಇದರ ತಾಂತ್ರಿಕ ಮಾಹಿತಿಗಳನ್ನು ಅವರಿಗೆ ಮೊದಲೇ ಕಳುಹಿಸಿಕೊಡಲಾಗಿರುತ್ತದೆ.
ರಾಜಿಸಂಧಾನದಮೂಲಕವ್ಯಾಜ್ಯಇತ್ಯರ್ಥ ಪಡಿಸಿಕೊಳ್ಳಲು ಇಚ್ಛಿಸಿದವರು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸ ಬಹುದಾಗಿರುತ್ತದೆ.
ಕೋವಿಡ್-19 ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಎಸ್‌ಒಪಿಗಳನ್ನು ಪಾಲನೆ ಮಾಡಿ ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಂಡು ಪಕ್ಷಗಾರರು ತಾವಿದ್ದ ಸ್ಥಳದಿಂದಲೇ ತಮ್ಮವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಕೊಳ್ಳಬಹುದಾಗಿದೆ.