Advertisement

ಗಣಪತಿ ಕೇಸ್ ಗೆ ಟ್ವಿಸ್ಟ್, ಸಿಐಡಿ ಪೊಲೀಸರೇ ಸಾಕ್ಷ್ಯ ನಾಶ ಮಾಡಿದ್ರಾ?

10:33 AM Aug 24, 2017 | Sharanya Alva |

ಬೆಂಗಳೂರು: ರಾಜ್ಯಾದ್ಯಂತ ಬಹು ಚರ್ಚೆಗೆ ಕಾರಣವಾಗಿದ್ದ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಹೊಸದೊಂದು
ತಿರುವು ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ನಾಶ ಪಡಿಸಿದ್ದಾರೆಂದು ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖೀಸಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. 

ಹಲವು ದಾಖಲೆ ನಾಶ: ಗಣಪತಿ ಶವವಿದ್ದ ಕೋಣೆಯ ಒಳ ಬಾಗಿಲು ತೆರೆದುಕೊಂಡಿತ್ತು ಹಾಗೂ ಕೋಣೆಯ ಹೊರ ಬಾಗಿಲು ಮುಚ್ಚಿತ್ತು. ಕೋಣೆಯ ಸೀಲಿಂಗ್‌ ಫ್ಯಾನ್‌ನಿಂದ ಮೃತ ದೇಹವನ್ನು ಇಳಿಸುವಾಗ ಬೆರಳಚ್ಚು ತೆಗೆದಿಲ್ಲ. ಅಲ್ಲದೇ ಮೃತ ದೇಹದಲ್ಲಿ ಬುಲೆಟ್‌ ಏಟಿನ ಗುರುತುಗಳು ಪತ್ತೆಯಾಗಿವೆ. ಗಣಪತಿ ಮೊಬೈಲ್‌ನಲ್ಲಿದ್ದ ಪ್ರಮುಖ ಮುಖಂಡರ ಮಾಹಿತಿ ನಾಶ.

ಕೇಂದ್ರ ಸಚಿವರ ಸಂಬಂಧಿ ಯೊಬ್ಬರ ದೂರವಾಣಿ ಸಂಖ್ಯೆ, ಮಾಜಿ ಸಚಿವರು, ಶಾಸಕರಿಗೆ ಸಂಬಂಧಿಸಿದ ದಾಖಲೆಗಳು
ನಾಶ ಪಡಿಸಲಾಗಿದೆ. ಇದ ರೊಂದಿಗೆ 2500 ಫೋಟೋ ಗಳು, 57 ಸಂದೇಶಗಳು, 100 ಇ-ಮೇಲ್‌ಗ‌ಳು ನಾಶವಾಗಿವೆ
ಎನ್ನಲಾಗಿದೆ. ಇದೇ ವೇಳೆ 145ಕ್ಕೂ ಅಧಿಕ ಪುಟಗಳಿದ್ದ ಪ್ರಮುಖ ಪಿಡಿಎಫ್ ಫೈಲ್‌ ಕೂಡ ನಾಶ ಪಡಿಸಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋ ಗಾಲಯದ ವರದಿಯಲ್ಲಿ ಉಲ್ಲೇಖೀಸಿರುವುದಾಗಿ ಸುದ್ದಿ ವಾಹಿನಿ ವರದಿ ಮಾಡಿದೆ.

ಕಾಲ್‌ಲಿಸ್ಟ್‌ನಲ್ಲಿ ಡಿಲೀಟ್‌?: ಕಾಂಗ್ರೆಸ್‌ ಶಾಸಕ ಮುನಿರತ್ನ, ಕೇಂದ್ರ ಸಚಿವ ಸದಾನಂದಗೌಡ ಪುತ್ರ ಕಾರ್ತಿಕ್‌ಗೌಡ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಸೇರಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ ಅವರ ಪುತ್ರ ಅಭಿಜಯ್‌, ಎಸಿಪಿ ಮಲ್ಲೇಶ್ವರಂ ಹಾಗೂ ರಾಮನಗರ ಡಿವೈಎಸ್‌ಪಿ, ಎಸಿಪಿ ಜಯರಾಂ ಪೊಲೀಸ್‌ ಕಟ್ರೋಲ್‌ ರೂಂ ಅಧಿಕಾರಿ ಹಾಗೂ ಇಬ್ಬರು ಡಿಜಿಪಿ ಸಂಬಂಧಿಕರ ನಂಬರ್‌ ಕಾಲ್‌ಲೀಸ್ಟ್‌ ನಿಂದ ಡಿಲೀಟ್‌ ಆಗಿದೆ.

Advertisement

ನಾಶವಾದ ಸಾಕ್ಷ್ಯಗಳು: 2,500 ಫೋಟೋಗಳು, 57 ಸಂದೇಶಗಳು, 100 ಇ-ಮೇಲ್‌, 145 ಪಿಡಿಎಫ್ ಫೈಲ್‌ಗ‌ಳು,
791 ಟೆಕ್ಸ್ಟ್ ಫೈಲ್‌ಗ‌ಳು, 31 ಪಿಪಿಟಿ ಫೈಲ್‌ಗ‌ಳು, ಗಣಪತಿ ಮೊಬೈಲ್‌ನಲ್ಲಿದ್ದ 52 ಸಂದೇಶಗಳು, ಶಾಸಕರು, ಸಚಿವರು ಸೇರಿ 352 ಹೆಸರುಗಳು, 16 ಜಿಬಿ ಸಾಮರ್ಥಯದ ಪೆನ್‌ಡ್ರೈವ್‌ನಲ್ಲಿದ್ದ 199 ಫೈಲ್‌, 8 ಜಿಬಿ ಪೆನ್‌ಡ್ರೈವ್‌ನಲ್ಲಿದ್ದ 185 ಫೈಲ್‌, 910 ಎಂಎಸ್‌ ಎಕ್ಸೆಲ್‌ ಫೈಲ್‌ಗ‌ಳು, ಗಣಪತಿ ಮೊಬೈಲ್‌ನಲ್ಲಿದ್ದ 31 ಕರೆಗಳ ಮಾಹಿತಿ ಸೇರಿ ಕಾಲ್‌ ಡಿಟೇಲ್ಸ್‌ ನಾಶ ಪಡಿಸಲಾಗಿದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ. 2016ರ ಜುಲೈ7ರಂದು ಗಣಪತಿ ಮಡಿಕೇರಿಯ ವಸತಿ ಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದಕ್ಕೆ ಸಚಿವ ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಎ.ಎಂ.ಪ್ರಸಾದ್‌, ಪ್ರಣವ್‌ ಮೊಹಂತಿ ಕಿರುಕುಳ ಕಾರಣ ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next