Advertisement

ದೆಹಲಿಯ ರೈತ ಹೋರಾಟಕ್ಕೆ ಬೆಂಬಲ  

12:56 PM Feb 11, 2021 | Team Udayavani |

ಧಾರವಾಡ: ದೆಹಲಿಯಲ್ಲಿನ ರೈತ ಹೋರಾಟ ಬೆಂಬಲಿಸಿ ರೈತ ಹಿತರಕ್ಷಣಾ ಪರಿವಾರದ ವತಿಯಿಂದ ನಡೆದಿರುವ ಅನಿರ್ದಿಷ್ಟ ಸರಣಿ ಸತ್ಯಾಗ್ರಹ 11ನೇ ದಿನ ಪೂರೈಸಿದ್ದು, ಬುಧವಾರ ರೈತರು ಮೋದಿ ಸರಕಾರದ ವಿರುದ್ಧ ಭಜನೆ ಪದಗಳನ್ನು ಹಾಡಿ ಆಕ್ರೋಶ ಹೊರ ಹಾಕಿದರು.

Advertisement

ಮಾಳಪ್ಪ ಸುಣಗಾರ, ರಂಗಪ್ಪ ಭೋವಿ, ಬಸಪ್ಪ ದನದಮನಿ, ಫುಂಡಲಿಕಪ್ಪ ಕುರಿ, ಹನುಮಂತಪ್ಪ ಕಂಬಾರ, ಬಸವರಾಜ ಉಂಡೋಡಿ ಅವರ ಸಾರಥ್ಯದ ಅಮ್ಮಿನಬಾವಿಯ ಅನ್ನದಾತರ ಭಜನಾ ಮಂಡಳಿ ವತಿಯಿಂದ ಹಲವು ಗಂಟೆಗಳ ಕಾಲ ನಡೆದ ಭಜನಾ ಪದಗಳು ನೆರೆದವರ ಗಮನ ಸೆಳೆದವು. ಅದರಲ್ಲೂ ಸೀಮಿ ಇಲ್ಲದ ಭೂಮಿಯ ಮಾಡಿ, ನೇಗಿಲ ಇಲ್ಲದ ಜಮೀನ ಮಾಡಿ, ಮನಬಂದ ಕಾನೂನು ಮಾಡಿ ಎಂಬ  ಮೋದಿ ಸರಕಾರದ ನಡೆ, ನುಡಿಗಳ ಪದಗಳು ಎಲ್ಲರ ಗಮನ ಸೆಳೆದವು.

ಈ ವೇಳೆ ಮಾತನಾಡಿದ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್‌. ನೀರಲಕೇರಿ, ಸರಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ಯಾವುದೇ ವ್ಯಾಪಾರಿ ಖರೀದಿ ನಿಯಮ ಉಲ್ಲಂಘಿಸಿದರೆ ಕನಿಷ್ಟ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡ ವಿ ಧಿಸುವಂತಾಗಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಗೋವಿನ ಜೋಳಕ್ಕೆ ಕಳೆದ ವರ್ಷದ ಸೆಪ್ಟಂಬರ್‌ ತಿಂಗಳಲ್ಲಿಯೇ 1850 ರೂ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ಆದರೆ ಈವರೆಗೆ ನಾಲ್ಕು ತಿಂಗಳು ಕಳೆದರೂ ಒಂದು ಕೆ.ಜಿ ಕೂಡ ಖರೀದಿ ಆಗಿಲ್ಲ. ಜಿಲ್ಲೆಯಲ್ಲಿ ಒಂದೇ ಒಂದು ಖರೀದಿ ಕೇಂದ್ರಗಳು ಕಾರ್ಯಾರಂಭವಾಗಿಲ್ಲ. ಬದಲಿಗೆ 2 ಲಕ್ಷ ಟನ್‌ ಗೋವಿನ ಜೋಳ ಕೇವಲ 500- 600 ಮಧ್ಯವರ್ತಿಗಳ ಪಾಲಾಗಿದೆ ಎಂದು ದೂರಿದರು.

ಇದನ್ನೂ ಓದಿ :ಕುರುಬ ಸಮಾವೇಶಕ್ಕೆ ಬಂದ ಜನ ನೋಡಿದ ಸಿದ್ದರಾಮಯ್ಯಗೆ ಕಿರಿಕಿರಿಯಾಗಿದೆ: ಈಶ್ವರಪ್ಪ ವಾಗ್ದಾಳಿ

Advertisement

ದೆಹಲಿಯಲ್ಲಿ ರೈತ ಹೋರಾಟಗಾರ ರಾಕೇಶ್‌ ಸಿಂಗ್‌ ಟಿಕಾಯತ್‌ ಅವರು ಅಕ್ಟೋಬರ್‌ 2ರವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಘೋಷಿಸಿದ್ದು, ಅಲ್ಲಿಯವರೆಗೆ ಸರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದರು.

ಅಬ್ದುಲ್‌ ಖಾನ್‌, ನರಹರಿ ಕಾಗಿನೆಲೆ, ಶ್ರೀಶೈಲಗೌಡ ಕಮತರ, ನಾಗರಾಜ ಕಿರಣಗಿ, ಸಲೀಂ ಸಂಗನಮುಲ್ಲಾ, ಲಕ್ಷ್ಮಣ ಬಕ್ಕಾಯಿ, ಸಿದ್ದಪ್ಪ ಕಳಸಣ್ಣವರ, ಸಚಿನ ಮುದರಡ್ಡಿ, ನವೀನ ಹೊಸಮನಿ, ಶಿವಾನಂದ ಬೂಬಣ್ಣವರ, ನಾರಾಯಣ ನಲವಡಿ ಸೇರಿದಂತೆ ಬಲ್ಲರವಾಡ, ಹೆಬಸೂರ ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next