Advertisement

ವಿಂಡೀಸ್‌ ತಂಡದಲ್ಲಿ ಡ್ವೇನ್‌ ಬ್ರಾವೊ

10:03 AM Jan 14, 2020 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಆಲ್‌ರೌಂಡರ್‌ ಡ್ವೇನ್‌ ಬ್ರಾವೊ 2016ರ ಬಳಿಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾಡುವ ಹಾದಿಯಲ್ಲಿದ್ದಾರೆ. ಅವರನ್ನು ಐರ್ಲೆಂಡ್‌ ವಿರುದ್ಧದ ಟಿ20 ಸರಣಿಗಾಗಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

36ರ ಹರೆಯದ ಬ್ರಾವೊ ಕಳೆದ ಡಿಸೆಂಬರ್‌ನಲ್ಲಿ ಟಿ20 ನಿವೃತ್ತಿಯಿಂದ ಹೊರಬರುವುದಾಗಿ ಪ್ರಕಟಿಸಿದ್ದರು. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡುವುದು ಅವರ ಇಂಗಿತವಾಗಿತ್ತು. ಇದಕ್ಕೀಗ ಕಾಲ ಕೂಡಿಬಂದಂತಿದೆ.ಡ್ವೇನ್‌ ಬ್ರಾವೊ 2016ರಲ್ಲಿ ಪಾಕಿಸ್ಥಾನ ವಿರುದ್ಧ ಅಬುಧಾಬಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ (ಟಿ20) ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next