Advertisement

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

04:15 PM Jun 21, 2020 | sudhir |

ನವದೆಹಲಿ: ಯೋಗವು ಮಾನವ ಜನಾಂಗದ ಏಳ್ಗೆಗಾಗಿ ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ” ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದ್ದಾರೆ.

Advertisement

2014ರ ಸೆಪ್ಟೆಂಬರ್‌ ೨೭ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಯಲ್ಲಿ ಯೋಗದ ಮಹತ್ವವನ್ನು ತಿಳಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಮಂಡಿಸಿದ್ದರು. ಪರಿಣಾಮವಾಗಿ 2015ರ ಜೂನ್‌ 21ರಂದು ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಇಂದು ವಿಶ್ವದ ಬಹುತೇಕ ದೇಶಗಳಲ್ಲಿ ಈ ದಿನವನ್ನು ಯೋಗ ದಿನವಾಗಿ ಆಚರಿಸಲಾಗುತ್ತಿದೆ.

ಭಾರತವು ಇದರ ನೇತೃತ್ವ ವಹಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತಕ್ಕೆ ಸಂದ ಗೌರವ ಇದಾಗಿದೆ ಎಂದು ಸಚಿವರು ತಿಳಿಸಿದರು.

ಯೋಗವು ಬರೀ ಆಸನ, ಪ್ರಾಣಾಯಾಮ, ಸೂರ್ಯನಮಸ್ಕಾರ, ವ್ಯಾಯಾಮವಲ್ಲ. ಬದಲಿಗೆ ಜನರು ದೈಹಿಕವಾಗಿ, ಮಾನಸಿಕವಾಗಿ ಸ್ವಾಸ್ಥ್ಯ ಜೀವನ ನಡೆಸಲು ಇರುವ ಸಮಗ್ರ ಸಾಧನವಾಗಿದೆ. ವಿಶ್ವದ ಇಂದಿನ ಕಾಲಘಟ್ಟದಲ್ಲಿ ಯೋಗವು ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ಯೋಗಾಭ್ಯಾಸದಿಂದ ನಮ್ಮ ಒಟ್ಟಾರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು.

ಪ್ರಾಣಾಯಾಮದಿಂದ ಶ್ವಾಸಕೋಶ ಬಲಗೊಳ್ಳುತ್ತದೆ. ಕೊರೊನಾ ಮುಂತಾದ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಇದು ತುಂಬಾನೇ ಸಹಕಾರಿ. ನಮ್ಮ ಯೋಗಾಭ್ಯಾಸ ಇವತ್ತೊಂದೇ ದಿನಕ್ಕೆ ಕೊನೆಯಾಗದೆ ಜೀವನದ ಅವಿಭ್ಯಾಜ್ಯ ಅಂಗವಾಗಲಿ ಎಂದು ಅವರು ಆಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next