Advertisement
ರಾಜ್ಯ ಸರಕಾರವು ಗಡುವಿನ ಬಳಿಕ ನಾಮನಿರ್ದೇಶ ಪತ್ರ ಸಲ್ಲಿಸಿದೆ, ಹಾಗಾಗಿ ಅವರಿಬ್ಬರ ಹೆಸರನ್ನು ತಿರಸ್ಕರಿಸಲಾಯಿತು. ಚಂದ್ ಅವರ ವಿಷಯದಲ್ಲಿ ಗಡುವು ಮಾತ್ರವಲ್ಲದೇ ಅವರು ಪಡೆದ ಪದಕಗಳು ರ್‍ಯಾಂಕಿಂಗಿಗೆ ಅನುಗುಣವಾಗಿ ಇರಲಿಲ್ಲ. ರ್‍ಯಾಂಕಿಂಗ್ ಆರ್ಡರ್ ನೀಡುವಂತೆ ಭಾರತೀಯ ಆ್ಯತ್ಲೆಟಿಕ್ ಫೆಡರೇಶನ್ ಬಳಿ ಕೇಳಿದ ಬಳಿಕ ಅವರು ಐದನೇ ಸ್ಥಾನದಲ್ಲಿದ್ದರು. ಹೀಗಾಗಿ ಆಕೆಯ ನಾಮನಿರ್ದೇಶವನ್ನು ತಿರಸ್ಕರಿಸಲಾಯಿತು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಅರ್ಜುನ ಪ್ರಶಸ್ತಿಗೆ ಪರಿಗಣಿಸುವಂತಾಗಲು ತನ್ನ ನಾಮನಿರ್ದೇಶ ಪತ್ರವನ್ನು ಕ್ರೀಡಾ ಸಚಿವಾಲಯಕ್ಕೆ ಮರಳಿ ಸಲ್ಲಿಸುವಂತೆ ದ್ಯುತಿ ಚಂದ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದ ವೇಳೆ ಕೇಳಿಕೊಂಡಿದ್ದಾರೆ. ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ನಪೋಲಿಯಲ್ಲಿ ನಡೆದ ವಿ.ವಿ. ಗೇಮ್ಸ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ಅವರಿಗೆ ತೋರಿಸಿದ್ದೇನೆ ಮತ್ತು ಈ ಹಿನ್ನೆಲೆಯಲ್ಲಿ ನನ್ನ ನಾಮನಿರ್ದೇಶ ಪತ್ರವನ್ನು ಮರಳಿ ಸಲ್ಲಿಸುವಂತೆ ಮನವಿ ಮಾಡಿದ್ದೇನೆ. ಪತ್ರವನ್ನು ಮರಳಿ ಸಲ್ಲಿಸುವ ಭರವಸೆಯಿತ್ತ ಪಟ್ನಾಯಕ್, ನೀವು ಯಾವುದೇ ಚಿಂತೆ ಮಾಡದೆ ಮುಂಬರುವ ಸ್ಪರ್ಧೆಗಳಿಗಾಗಿ ಸಿದ್ಧತೆ ಮಾಡಿ ಎಂದು ಹೇಳಿದ್ದಾರೆಂದು ದ್ಯುತಿ ಚಂದ್ ತಿಳಿಸಿದರು.