Advertisement
7ನೇ ಲೇನ್‌ನಲ್ಲಿ ಓಡಿದ ದ್ಯುತಿ ಚಂದ್ 11.32 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು. ಆದರೆ ಇದು ಅವರ ರಾಷ್ಟ್ರೀಯ ದಾಖಲೆಗಿಂತಲೂ ಕೆಳ ಮಟ್ಟದ ಸಾಧನೆ (11.29). ರಾಷ್ಟ್ರೀಯ ದಾಖಲೆಯನ್ನೇ ಕಾಯ್ದುಕೊಂಡಿದ್ದರೆ ದ್ಯುತಿ ಬಂಗಾರದಿಂದ ಸಿಂಗಾರಗೊಳ್ಳಬಹುದಿತ್ತು. ಬಹ್ರೈನಿನ ಒದಿಯೊಂಗ್ ಎದಿದಿಯೋಂಗ್ ಚಿನ್ನ (11.30), ಚೀನದ ವೀ ಯೊಂಗ್ಲಿ ಕಂಚು ಗೆದ್ದರು (11.33). ಒಡಿಶಾದ 22ರ ಹರೆಯದ ದ್ಯುತಿ ಚಂದ್ ಪಾಲಿಗೆ ಇದು ಮೊದಲ ಏಶ್ಯಾಡ್ ಕೂಟವಾಗಿದೆ. ದ್ಯುತಿ ಚಂದ್ ಸೆಮಿಫೈನಲ್ ಹೀಟ್ಸ್‌ನಲ್ಲಿ 3ನೇ, ಒಟ್ಟಾರೆಯಾಗಿ 5ನೇ ಸ್ಥಾನದೊಂದಿಗೆ ಓಟ ಮುಗಿಸಿದ್ದರು.
ವರ್ಷದ ಹಿಂದೆ ದ್ಯುತಿ ದೇಹದಲ್ಲಿ ಆ್ಯಂಡ್ರೊಜನ್ (ಪುರುಷರ ದೇಹದಲ್ಲಿರುವ ಹಾರ್ಮೋನು) ಪ್ರಮಾಣ ಹೆಚ್ಚಿದೆ ಎನ್ನುವ ಆರೋಪಕ್ಕೆ ತುತ್ತಾಗಿದ್ದರು. ಕೊನೆಗೂ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ಇವರು ನಿರಪರಾಧಿ ಎನ್ನುವುದು ಸಾಬೀತಾಗಿತ್ತು. ಇದಾದ ಬಳಿಕ ದ್ಯುತಿ ಏಶ್ಯಾಡ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.