Advertisement

ವಲಸಿಗರಿಗೆ ನಿಯಂತ್ರಣ: ನೆದರ್ಲೆಂಡ್‌ ಸರ್ಕಾರ ಪತನ

09:33 PM Jul 08, 2023 | Team Udayavani |

ದ ಹೇಗ್‌: ಅಕ್ರಮ ವಲಸಿಗರ ಮೇಲೆ ನಿಯಂತ್ರಣ ಹೇರುವ ವಿಚಾರದಲ್ಲಿ ಒಪ್ಪಂದಕ್ಕೆ ಬರುವಲ್ಲಿ ವಿಫ‌ಲವಾದ ಹಿನ್ನೆಲೆಯಲ್ಲಿ ನೆದರ್ಲೆಂಡ್‌ನ‌ ಪ್ರಧಾನಿ ಮಾರ್ಕ್‌ ರಟ್‌ ನೇತೃತ್ವದ ಸರ್ಕಾರ ಪತನವಾಗಿದೆ.

Advertisement

ಈ ಬಗ್ಗೆ ದೊರೆಯನ್ನು ಭೇಟಿಯಾಗಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. 2010ರಿಂದ ರಟ್‌ ನೇತೃತ್ವದ ಪೀಪಲ್ಸ್‌ ಪಾರ್ಟಿ ಫಾರ್‌ ಫ್ರೀಡಂ ಆ್ಯಂಡ್‌ ಡೆಮಾಕ್ರಸಿ ಪಕ್ಷದ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರ ಮುಕ್ತಾಯವಾಗಿದೆ.

ಅವರು ನೆದರ್ಲೆಂಡ್‌ನ‌ ಎರಡನೇ ಅತ್ಯಂತ ದೀರ್ಘಾವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದ್ದಾರೆ. ದೇಶದಲ್ಲಿ ಆಶ್ರಯ ಕೋರಿ ಬರುವವರಿಗೆ ಮಿತಿ ಹೇರುವ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಪಾಲುದಾರ ಪಕ್ಷಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಸರ್ಕಾರದ ಪತನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next