Advertisement

ಹಿಂದಿನ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ವರದಿಯನ್ನು ಡಸ್ಟ್ ಬಿನ್ ಕೆಳಗಿಟ್ಟಿತ್ತು: ಸಿ.ಟಿ.ರವಿ

12:06 PM Oct 02, 2019 | Team Udayavani |

ಚಿಕ್ಕಮಗಳೂರು: ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮಂಡನೆ ಮಾಡಿರಲಿಲ್ಲ. ಕೊಟ್ಯಾಂತರ ರೂಪಾಯಿ‌ ಖರ್ಚು ಮಾಡಿ ವರದಿ ತಯಾರಿಸಿ, ಅದನ್ನು ಡಸ್ಟ್ ಬಿನ್ ಕೆಳಗಿಟ್ಟಿದ್ದರು. ಈಗ  ಜಾತಿ ಗಣತಿ ವರದಿ‌ ಸರ್ಕಾರಕ್ಕೆ ಸಲ್ಲಿಕೆ ಮಾಡಲು ಹೊರಟಿದ್ದಾರೆ ಎಂದು ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ತಯಾರಿಸಿದ ವರದಿ ಮೇಲೆ ಅವರಿಗೆ ವಿಶ್ವಾಸ ಇರಲಿಲ್ಲ. ವರದಿ ತಯಾರಿಸಿ ಅದನ್ನು ಮೂರು ವರುಷ ಡಸ್ಟ್ ಬಿನ್ ಕೆಳಗಿಟ್ಟಿದ್ದರು. ಅವರ ಸರ್ಕಾರಕ್ಕೆ ವರದಿ ಮೇಲೆ ನಿರೀಕ್ಷೆ ಇಲ್ಲವೆಂದಾದರೆ ಇನ್ನೊಂದು ಸರ್ಕಾರದಿಂದ ಅದನ್ನು ನಿರೀಕ್ಷೆ ಮಾಡೋದು ಹೇಗೆ‌ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next