ಹೊಸದಿಲ್ಲಿ: ಜಾತೀಯತೆ ಮತ್ತು ಪ್ರಾದೇಶಿಕತೆಯಂತಹ ಸಾಮಾಜಿಕ ವಿರೂಪಗಳನ್ನು ಬೇರುಸಹಿತ ಕಿತ್ತೊಗೆಯುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ.
ದೆಹಲಿಯ ದ್ವಾರಕಾದ ರಾಮ್ ಲೀಲಾ ಮೈದಾನದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವುದು ಸೇರಿದಂತೆ 10 ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದರು.
ಇಂದು, ‘ರಾವಣ ದಹನ’ ಕೇವಲ ಪ್ರತಿಕೃತಿ ಮಾತ್ರ ದಹನವಾಗಬಾರದು ಆದರೆ ಜಾತಿವಾದ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ತಾಯಿ ಭಾರತಿಯನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ದಹನವೂ ಆಗಿರಬೇಕು” ಎಂದರು.
ರಾಮ ಮಂದಿರದ ಕುರಿತು ಮಾತನಾಡಿ “ದೀರ್ಘಕಾಲದ ನಂತರ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭಗವಾನ್ ರಾಮನ ಮಂದಿರವನ್ನು ನಿರ್ಮಿಸುತ್ತಿರುವುದನ್ನು ನೋಡುವ ಭಾಗ್ಯವಿದೆ. ಇದು ನಮ್ಮ ತಾಳ್ಮೆಯ ವಿಜಯದ ಸಂಕೇತವಾಗಿದೆ” ಎಂದರು.
ಇಸ್ರೋದ ಚಂದ್ರನ ಚಂದ್ರನ ಮೇಲ್ಮೈಯಲ್ಲಿ ಇಳಿದ ಯಶಸ್ವಿ ಪ್ರಯತ್ನವನ್ನು ಶ್ಲಾಘಿಸಿ”ನಾವು ಚಂದ್ರನನ್ನು ತಲುಪಿದ್ದೇವೆ. ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ನಾವು ಕೆಲವೇ ವಾರಗಳ ಹಿಂದೆ ಹೊಸ ಸಂಸತ್ತಿನ ಕಟ್ಟಡವನ್ನು ಪ್ರವೇಶಿಸಿದ್ದೇವೆ. ಮಹಿಳಾ ಶಕ್ತಿಗೆ ಪ್ರಾತಿನಿಧ್ಯ ನೀಡಲು, ಸಂಸತ್ತು ನಾರಿ ಶಕ್ತಿ ವಂದನ್ ಅಧಿನಿಯಮವ ನ್ನು ಅಂಗೀಕರಿಸಿದೆ” ಎಂದರು.