Advertisement

Dussehra: ದಸರಾಗೆ ಗರಿಗೆದರಿದ ಅರಮನೆ ಸಿದ್ಧತೆ

10:31 AM Oct 02, 2023 | Team Udayavani |

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ 13 ದಿನ ಗಳಷ್ಟೇ ಬಾಕಿ ಉಳಿ ದಿದ್ದು, ನಗರದೆಲ್ಲೆಡೆ ಸಿದ್ಧತೆ ಗರಿಗೆದರಿದೆ. ವಿಶೇಷವಾಗಿ ಅರಮನೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ದೀಪಾಲಂಕಾರ ದುರಸ್ತಿ ಚುರುಕಿನಿಂದ ಸಾಗಿದೆ.

Advertisement

ನಗರದ ಅಂಬಾವಿಲಾಸ ಅರಮನೆ ಕಟ್ಟಡಕ್ಕೆ ಶಾಶ್ವತವಾಗಿ ದೀಪಾಲಂಕಾರ ಮಾಡಿದ್ದು ಹಾಳಾಗಿದ್ದ 24.5 ಸಾವಿರ ಬಲ್ಬ್ ಬದಲಿಸುವ ಕಾರ್ಯದಲ್ಲಿ 15 ದಿನದಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ತೊಡಗಿದ್ದು ಕೆಲ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವುದೂ ಸೇರಿ ಒಟ್ಟು 1 ಲಕ್ಷ ಬಲ್ಬ್ ಬೆಳಕು ಝಗಮಗಿಸಿ ಅರಮನೆ ಸೌಂದರ್ಯವನ್ನು ವೃದ್ಧಿಸುತ್ತದೆ. ಆದರೆ, ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರ ವೇಳೆ ಮಳೆ ಬಂದಾಗ ಕೆಲವು ಬಲ್ಬ್‌ ಗಳು ಸಿಡಿದುಹೋಗುತ್ತವೆ. ಇದರಿಂದ ಪ್ರತಿ ವರ್ಷ ದಸರಾ ವೇಳೆ 15 ರಿಂದ 20 ಸಾವಿರ ಬಲ್ಬ್ ಹಾನಿಗೀಡಾಗುತ್ತವೆ. ಹೀಗಾಗಿ, ದೀಪಗಳ ಸಾಲು ಪರಿಶೀಲಿಸಿ ಕೆಟ್ಟಿರುವ ಬಲ್ಬ್ ಗುರುತಿಸಲಾಗಿತ್ತು. ಇದಕ್ಕಾಗಿ ದೆಹಲಿ, ಕೋಲ್ಕತ್ತದಲ್ಲಿ ವಿಶೇಷವಾಗಿ ತಯಾರಾಗುವ ಬಲ್ಬ್ ತರಿಸಲಾಗಿದೆ. ಆದರೆ, ಈ ಬಾರಿ ಕೊಂಚ ಹೆಚ್ಚಾಗಿ ಬಲ್ಬ್ ಹಾಳಾಗಿದ್ದು, ಅವುಗಳನ್ನು ಬದಲಾಯಿಸಲಾಗುತ್ತಿದೆ.

ದೇಶದೆಲ್ಲಡೆ ಎಲ್‌ಇಡಿ ದೀಪ ಹೆಚ್ಚಾಗಿದ್ದರೂ ಪಾರಂಪರಿಕ ಸೌಂದರ್ಯ ಕಾಯ್ದುಕೊಳ್ಳಲು ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ್ಗಳನ್ನೇ ಬಳಸಲಾಗುತ್ತಿದೆ. ಸ್ವರ್ಣ ಬಣ್ಣದಿಂದ ಬೆಳಗಲಿರುವ ಈ ಬಲ್ಬ್ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.

ಕುಶಲತೋಪು ತಾಲೀಮಿಗೆ ಗಜಪಡೆ ಅಣಿ: ಗಜಪಡೆ 3 ಹಂತದ ಕುಶಾಲುತೋಪಿನ ತಾಲೀಮಿಗೆ ಅಣಿಯಾಗಿವೆ. ಅಕ್ಟೋಬರ್‌ ಮೊದಲ ವಾರ ಮೊದಲ ಹಂತದ ಕುಶಾಲತೋಪು ತಾಲೀಮು ದೊಡ್ಡ ಕೆರೆ ಮೈದಾ ನ ದಲ್ಲಿ ನಡೆಯಲಿದೆ. 6 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 18 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಮೊದಲ ಹಂತದಲ್ಲಿ ಆನೆಗಳ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗುತ್ತದೆ. ವಿಜಯದಶಮಿಯಂದು ಅರಮನೆ ಬಳಿ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆ, ಕುದುರೆ ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.

ಮರದ ಅಂಬಾರಿ ತಾಲೀಮಿಗೂ ಸಿದ್ಧತೆ: ಈಗಾಗಲೇ ಅಂಬಾರಿ ಆನೆ ಕ್ಯಾಪ್ಟನ್‌ ಅಭಿಮನ್ಯು, ಭೀಮಾ, ಮಹೇಂದ್ರ, ಧನಂಜಯ ಹಾಗೂ ಗೋಪಿ ಆನೆಗೆ 500 ರಿಂದ 550 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಇದೀಗ ಶೇ.75 ಭಾರ ಹೊರುವ ತಾಲೀಮನ್ನು ಅಭಿಮನ್ಯು, ಮಹೇಂದ್ರ ಹಾಗೂ ಧನಂಜಯನಿಗೆ ನಡೆ ಸಲಾಗಿದೆ. 4-5 ದಿನಗಳಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಿದೆ. ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿ 850ಕ್ಕೂ ಹೆಚ್ಚು ಕೆ.ಜಿ. ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಲಿದ್ದಾನೆ. ಬಳಿಕ ಮಹೇಂದ್ರ, ಧನಂಜಯ ಆನೆ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.

Advertisement

ಬಿರುಸಿನಿಂದ ಸಾಗಿದ ಸುಣ್ಣ ಬಳಿಯುವ ಕಾರ್ಯ: ದಸರಾ ವೇಳೆ ಅರಮನೆಯನ್ನು ಮದುವಣಗಿತ್ತಿಯಂತೆ ಸಿಂಗರಿಸುವುದು ಪ್ರತಿ ವರ್ಷದ ವಾಡಿಕೆ. ಅಂತೆಯೆ, ಈ ಬಾರಿ ಅರಮನೆ ಮಂಡಳಿ ಸಕಲ ಸಿದ್ಧತೆ ನಡೆಸುತ್ತಿದೆ. ಅಂಬಾವಿಲಾಸ ಅರಮನೆಯಲ್ಲಿ ಮಂಗಳವಾರ ವಿವಿಧ ಸಿದ್ಧತೆ ಭರದಿಂದ ನಡೆದಿವೆ. ಅರಮನೆ ಜಯಮಾರ್ತಾಂಡ ದ್ವಾರದ ಪಕ್ಕದ ತ್ರಿನೇಶ್ವರ ದೇಗುಲಕ್ಕೆ ಸುಣ್ಣ-ಬಣ್ಣ ಬಳಿಯುವಲ್ಲಿ ಕಾರ್ಮಿಕರು ನಿರತರಾಗಿದ್ದರು. ಪ್ರವಾಸಿಗರು, ಅರಮನೆ ವೀಕ್ಷಣೆ ಜತೆಗೆ ದಸರಾ ಸಿದ್ಧತಾ ಕೆಲಸಗಳನ್ನೂ ನೋಡಿ ಖುಷಿಪಟ್ಟರು. ತಮ್ಮ ಮೊಬೈಲ್‌ಗ‌ಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

ಸದ್ಯದಲ್ಲೇ ಪೂಜೆ :  ಈ ಸಂಬಂಧ ಸದ್ಯದಲ್ಲೇ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಎಲ್ಲಾ ಫಿರಂಗಿ ಗಾಡಿಗಳಿಗೆ ಜಿಲ್ಲಾಡಳಿತ ಪೂಜೆ ಸಲ್ಲಿಸಲಿದೆ. ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು, ಪುರೋಹಿತರಾದ ಪ್ರಹ್ಲಾದ್‌ ರಾವ್‌ ಶಾಸ್ತ್ರೋಕ್ತವಾಗಿ ಕುಂಬಳಕಾಯಿ ಒಡೆಯುವ ಮೂಲಕ ಫಿರಂಗಿಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ .ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‌ ಸೇಠ್, ಶ್ರೀವತ್ಸ, ಕೆ.ಹರೀಶ್‌ಗೌಡ ಮತ್ತಿತರರು ಭಾಗಿಯಾಗಲಿದ್ದಾರೆ.

ಈಗಾಗಲೇ ಫಿರಂಗಿ ಸ್ವಚ್ಛತೆ ಕೆಲಸವೂ ನಡೆಯುತ್ತಿದೆ. ಆನೆಗಳಿಗೆ ಮರದ ಅಂಬಾರಿ ಮತ್ತು ಕುಶಲತೋಪು ಸಿಡಿಸುವ ತಾಲೀ ಮನ್ನು ಈ ವಾರ ಆರಂಭಿಸಲಾಗುತ್ತದೆ. 3 ಹಂತದಲ್ಲಿ ಕುಶಾಲತೋಪು ತಾಲೀಮು ನಡೆಯಲಿದೆ. ಸದ್ಯ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜ ಪಡೆ 700 ರಿಂದ 750 ಕೆ.ಜಿ.(ಶೇ.75 ರಷ್ಟು) ಭಾರ ಹೊರುವ ತಾಲೀಮು ನಡೆಸುತ್ತಿದೆ. ಸೌರಭ್‌ ಕುಮಾರ್‌, ಡಿಸಿಎಫ್

ವಿಶ್ವವಿಖ್ಯಾತ ನಾಡಹಬ್ಬ ದಸರಾ ಹಿನ್ನೆಲೆ ಅರಮನೆಯ ದೀಪಾಲಂಕಾರ ದುರಸ್ತಿ ಕೆಲಸ ಮಾಡ ಲಾಗಿದೆ. ಹಾಳಾಗಿದ್ದ ಬಲ್ಬ್ ಬದಲಿಸುವ ಕಾರ್ಯ ಹಲವು ದಿನಗಳಿಂದ ನಡೆದಿದೆ. ಸ್ವತ್ಛತೆ ಜತೆ ಗೆ ಸುಣ್ಣ-ಬಣ್ಣ ಬಳಿಯುವುದು ಸೇರಿ ಎಲ್ಲಾ ಕೆಲಸ ಭರದಿಂದ ಸಾಗಿವೆ. ಟಿ.ಎಸ್‌.ಸುಬ್ರಹ್ಮಣ್ಯ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ‌

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next