Advertisement
ನಾಡಿನ ಅಧಿದೇವತೆ ಹಬ್ಬವಾಗಿರುವ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಚನ್ನರಾಯಪಟ್ಟಣದ ನೂರಾರು ಮನೆಗಳಲ್ಲಿ ದಸರಾ ಬೊಂಬೆ ದರ್ಬಾರ್ ಆರಂಭಗೊಂಡಿದೆ. ಪ್ರತಿದಿನ ಸಂಜೆ ಬೊಂಬೆ ಕೂರಿಸಿರುವ ಮನೆ ಗಳಿಗೆ ಚಿಣ್ಣರು ತೆರಳಿ ಬೊಂಬೆಗಳನ್ನು ನೋಡಿ ಸಂಭ್ರಮಿಸಿದ್ದಾರೆ.
Related Articles
Advertisement
ಬೊಂಬೆ ಹಬ್ಬದ ಹಿನ್ನೆಲೆ: ಮೈಸೂರು ದಸರಾ ಹಾಗೂ ಬೊಂಬೆ ಹಬ್ಬಕ್ಕೂ ಐತಿಹಾಸಿಕ ನಂಟಿದೆ. ಬೊಂಬೆಗಳ ಸಂಪ್ರದಾಯ ಹಿಂದೂ ನಾಗರಿಕ ಅರಂಭದಿಂದ ಬಂದಿದೆ. ನವರಾತ್ರಿ ಬೊಂಬೆ ಉತ್ಸವ ಮಾತ್ರ ರಾಜವಂಶಸ್ಥರಿಂದ ಆರಂಭವಾಗಿ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ. ಹೆಣ್ಣು ಮಕ್ಕಳು, ರಾಜ, ಮಂತ್ರಿ ಆಸ್ಥಾನದವರ ಪ್ರತೀಕವಾಗಿ ಬೊಂಬೆಯನ್ನು ಕೂರಿಸಿ, ಅದಕ್ಕೆ ಕಲಾತ್ಮಕ ಅಲಂಕಾರ ಮಾಡುತ್ತಿದ್ದರು. ರಾಜ ಪರಿವಾರದವರ ವೈಭವದ ಆಟಿಕೆಗಳ ಪ್ರ ದರ್ಶನ ಮಕ್ಕಳಿಗೆ ಮನರಂಜನೆ ನೀಡುವ ಸಲುವಾಗಿ, ಆರಂಭಗೊಂಡು ಬೊಂಬೆ ಕೂರಿಸುವುದು ನಂತರದ ದಿವಸ ಗಳಲ್ಲಿ ಸಂಪ್ರದಾಯವಾಗಿ ರೂಪ ಪಡೆಯಿತು.
ಹಲವು ದಿವಸ ಆಚರಣೆ ಹಬ್ಬ: ನವರಾತ್ರಿಯು ಹಿಂದೂ ಹಬ್ಬವಾಗಿದ್ದು ಅದು ಒಂಬತ್ತು ರಾತ್ರಿಯನ್ನು ಮತ್ತು ಹತ್ತು ದಿವಸವನ್ನು ವ್ಯಾಪಿಸಿದೆ. ಪ್ರತಿ ವರ್ಷವೂ ಶರತ್ಕಾಲದಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಭಿನ್ನ ಕಾರಣಕ್ಕಾಗಿ ಆಚರಿಸಲಾಗುವುದು. ಭಾರತೀಯ ಉಪ ಖಂಡದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆ ನವರಾತ್ರಿಯ ಸಮಾನಾರ್ಥಕವಾಗಿದೆ. ಇದರಲ್ಲಿ ದುರ್ಗಾ ದೇವಿ ಧರ್ಮವನ್ನು ಪುನಃಸ್ಥಾಪಿಸಲು ಸಹಾಯ ಮಾಡಲು, ಎಮ್ಮೆ ರಾಕ್ಷಸನ ವಿರುದ್ಧ ಹೋರಾಡುತ್ತಾನೆ ಮತ್ತು ವಿಜಯಶಾಲಿಯಾಗುತ್ತಾನೆ. ಈ ದಿವಸವನ್ನು ವಿಜಯದಶಮಿ ಆಚರಣೆ ಮಾಡುವ ಮೂಲಕ ನವರಾತ್ರಿ ಹಬ್ಬ ವನ್ನು ಮುಕ್ತಾಯ ಮಾಡಲಾಗುತ್ತದೆ.
ಶತಮಾನಗಳಿಂದಲೂ ಜಾರಿಯಲ್ಲಿದೆ: ಬೊಂಬೆ ಕೂರಿಸುವುದು ಇಂದು ನಿನ್ನೆ ಆಚ ರ ಣೆಯಲ್ಲ. ಹಲವು ಮನೆಗಳಲ್ಲಿ ತಲೆ ತಲಾತರದಿಂದ ಬೊಂಬೆ ಕೂರಿಸ ಲಾಗುತ್ತಿದೆ. ಇನ್ನು ಕೆಲವು ಮನೆಯವರು ಹತ್ತಾರು ವರ್ಷದಿಂದ ಬೊಂಬೆ ಕೂರಿಸುವುದನ್ನು ರೂಢಿಸಿಕೊಂಡಿದ್ದಾರೆ. ಇತ್ತೀಚಿನ ದಿವಸದಲ್ಲಿ ಕೆಲ ಮನೆಯ ಮಹಿಳೆಯರು ತಾವು ಪ್ರವಾಸ ಹೋದಾಗ, ತಂದಂತಹ ಬೊಂಬೆಗಳನ್ನು ಪ್ರದರ್ಶನ ಮಾಡಲಿಕ್ಕಾಗಿ ನವರಾತ್ರಿಯ ಬೊಂಬೆ ಹಬ್ಬದ ದಿವಸ ಅದ್ಧೂರಿಯಾಗಿ ಅಲಂಕಾರ ಮಾಡಿದ ಮಂಟಪದಲ್ಲಿ ಬೊಂಬೆ ಕೂರಿಸುತ್ತಿದ್ದಾರೆ. ಸಂಪ್ರದಾಯದ ಬೊಂಬೆಗಳೊಂದಿಗೆ ಕ್ರಿಕೆಟ್, ಕಬಡ್ಡಿ, ಶಾಲೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸೇರಿದಂತೆ ಆಧುನಿಕತೆಯ ಬೊಂಬೆಗಳನ್ನು ಕೂರಿಸಲಾಗುತ್ತಿದೆ.
ನಮಗೆ ತಿಳಿದಂತೆ ಕಳೆದ 70 ವರ್ಷದಿಂದ ಮನೆಯಲ್ಲಿ ಬೊಂಬೆ ಕೂರಿಸಲಾಗುತ್ತಿದೆ. ನಮ್ಮ ಸಂಪ್ರದಾಯ ಮುಂದು ವರಿಯಬೇಕು. ವಿಜಯದಶಮಿ ನಮ್ಮ ಪವಿತ್ರವಾದ ಹಬ್ಬ. ಹಿರಿಯರು ಆಚರಿಸಿಕೊಂಡು ಬಂದಿರುವ ನವರಾತ್ರಿ ಬೊಂಬೆ ಉತ್ಸವ ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ. ಇದರಲ್ಲಿ ವಿಶೇಷವೇನೂ ಇಲ್ಲ. ●ಅಂಜಲಿ, ಮಹಾಲಕ್ಷ್ಮೀ ದೇವಸ್ಥಾನದ ಟ್ರಸ್ಟಿ.
●ಶಾಮಸುಂದರ್ ಕೆ. ಅಣ್ಣೇನಹಳ್ಳಿ