Advertisement

ಹಾಡಹಗಲೇ ಗಟಾರದ ತಾಜ್ಯ ಸ್ವತ್ಛತೆ ದುರ್ನಾತಕ್ಕೆ ಸಾರ್ವಜನಿಕರು ಕಂಗಾಲು

03:36 PM Feb 27, 2017 | Team Udayavani |

ಕುಂದಾಪುರ:  ಕುಂದಾಪುರ ಜನ ನಿಬಿಡ ಪ್ರದೇಶವಾದ ಬಸ್ಸು ನಿಲ್ದಾಣದ ಬಳಿ ಹಾಡುಹಗಲೇ ಗಟಾರದ ತಾಜ್ಯವನ್ನು ವಾಹನದಲ್ಲಿ ಸಂಗ್ರಹಿಸಲು ಹೊರಟ ಕುಂದಾಪುರ ಪುರಸಭೆಯ ಕ್ರಮವನ್ನು  ಸಾರ್ವಜನಿಕರು  ವಿರೋಧಿಸಿದ್ದಾರೆ.  ಈ ಸಂದರ್ಭದಲ್ಲಿ  ಅಸಹನೀಯ ವಾಸನೆಯಿಂದಾಗಿ  ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಬುಧವಾರ  ನಡು ಮಧ್ಯಾಹ್ನದ ಸಮಯ ಪುರಸಭೆಯ ಮಲಿನ ತಾಜ್ಯ ಸಂಗ್ರಹಿಸುವ ವಾಹನಕ್ಕೆ ಹೊಸ ಬಸ್ಸು ನಿಲ್ದಾಣದ ಬಳಿ ಹಲವು ಹೊಟೇಲ್‌, ಮನೆಗಳಿಂದ ಸಂಗ್ರಹವಾಗುವ ಗಟಾರದಿಂದ ತಾಜ್ಯ ವನ್ನು  ಸಂಗ್ರಹಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಬ್ಬಿದ ದುರ್ನಾತವು ಪರಿಸರದಲ್ಲಿ ಅಸಹನೀಯ ವಾಸನೆಯನ್ನು ಉಂಟು ಮಾಡಿದ್ದು ಕೆಲ ಗಂಟೆಗಳ ಕಾಲ ಸಾರ್ವಜನಿಕರು ಕಂಗಲಾಗಿ ಹೋಗಿದ್ದರು.

ಹೆಚ್ಚಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಮಾತ್ರ ತಾಜ್ಯವನ್ನು ಸಗ್ರಹಿಸುವುದು ವಾಡಿಕೆ ಆದರೆ ಇದು ತನಗೆ ಸಂಬಂಧವೇ ಇಲ್ಲದಂತೆ ಹಾಡು ಹಗಲೇ ತಾಜ್ಯವನ್ನು ಸಂಗ್ರಹಿಸಿ ಅಸಹನೀಯ ದುರ್ನಾತಕ್ಕೆ ಕಾರಣವಾದ ಪುರಸಭೆಯ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next