Advertisement

ಹಬ್ಬದ ವೇಳೆ ನಿರೀಕ್ಷಿತ ಮಟ್ಟದ ವ್ಯಾಪಾರ ವಹಿವಾಟು ನಡೆದಿಲ್ಲ : ವರದಿ

09:52 AM Nov 08, 2019 | sudhir |

ಹಬ್ಬದ ಸೀಸನ್‌ ಬಂತೆದರೆ ಮಳಿಗೆಗಳಲ್ಲಿ ಆಕರ್ಷಕ ಡಿಸ್ಕೌಂಟ್‌ನ ಫ‌ಲಕಗಳು ರಾರಾಜಿಸುತ್ತಾ ಇರುತ್ತವೆ ಆದರೆ ಈ ಬಾರಿ ಗ್ರಾಹಕರ ಅಪೇಕ್ಷೆಗೂ ಮೀರಿ ಆಫ‌ರ್‌ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ ಎಂದು ವರದಿಯೊಂದು ತಿಳಿಸಿದೆ.

Advertisement

ನೀರಸ ಪ್ರತಿಕ್ರಿಯೆ
ದೀಪಾವಳಿ ಎಂದಾಕ್ಷಣ ಮಾರುಕಟ್ಟೆ ಸುತ್ತಾಟ, ಖರೀದಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅಧಿಕ ಮಟ್ಟದಲ್ಲಿ ಗ್ರಾಹಕರನ್ನು ಎದುರು ನೋಡುತ್ತಿದ್ದ ವ್ಯಾಪಾರಿಗಳಿಗೆ ನಿರಾಸೆಯಾಗಿದ್ದು, ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಬ್ಯಾಂಕ್‌ ಆಫ್ ಅಮೆರಿಕ ಮೆರಿಲ್‌ ಲಿಂಚ್‌ ವರದಿ ಹೇಳಿದೆ.

120 ಮಳಿಗೆಗಳು
ಒಟ್ಟು 120 ಚಿಲ್ಲರೆ ಅಂಗಡಿ ಮುಂಗಟ್ಟುಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಶೇ.90 ರಷ್ಟು ವ್ಯಾಪಾರಿಗಳು ಕಳೆದ ವರ್ಷದ ಆದಾಯಕ್ಕಿಂತ, ಈ ವರ್ಷದ ಆದಾಯದ ಮಟ್ಟ ಕಡಿಮೆ ಇದೆ ಎಂದು ಹೇಳಿದ್ದಾರೆ.

ಬೇಡಿಕೆ ಕ್ಷೀಣಿಸುತ್ತಿದೆ
ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಕಂಡುಬರುತ್ತಿದ್ದು, ಬೇಡಿಕೆ ಕ್ಷೀಣಿಸುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದು, ಅಕ್ಟೋಬರ್‌ ತಿಂಗಳಿನಲ್ಲಿ ಉತ್ಪಾದನೆ ಮತ್ತು ಸೇವೆಗಳ ಚಟುವಟಿಕೆ ಕಡಿತವಾಗಿದೆ ಎಂದು ವರದಿ ತಿಳಿಸಿದೆ.

ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆ
ಸುಮಾರು ಶೇ.70 ರಷ್ಟು ಚಿಲ್ಲರೆ ವ್ಯಾಪಾರಿಗಳು ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದು, ಶೇ.30 ರಷ್ಟು ತೃಪ್ತಿದಾಯಕ ಎಂದು ಹೇಳಿದ್ದಾರೆ.

Advertisement

ಆನ್‌ಲೈನ್‌ ಶಾಪಿಂಗ್‌ ಮಾರಕ
ಹೆಚ್ಚುತ್ತಿರುವ ಆನ್‌ಲೈನ್‌ ಶಾಪಿಂಗ್‌ ಚಿಲ್ಲರೆ ವ್ಯಾಪಾರಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಜನರು ದೊಡ್ಡ ದೊಡ್ಡ ಮಾಲ್‌ ಹಾಗೂ ಬ್ರಾಂಡೆಡ್‌ ಮಳಿಗೆಗಳ ಮೊರೆ ಹೋಗುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next