ಲಂಡನ್: ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದಾಗ ಭಯೋತ್ಪಾದಕರನ್ನು ತಾನು ಹೇಗೆ ಎದುರಿಸಿದೆ ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿಕೊಂಡಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುವ ವೇಳೆ ರಾಹುಲ್, ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಯ ಭೀತಿ ಇರುವುದರಿಂದ ಆ ಪ್ರದೇಶದಲ್ಲಿ ಓಡಾಡದಂತೆ ಭದ್ರತಾ ಪಡೆಗಳು ತನ್ನ ಬಳಿ ಕೇಳಿಕೊಂಡಿದ್ದರು. ಆದರೆ ತಾನು ಯಾತ್ರೆ ಮುಂದುವರಿಸಲು ನಿರ್ಧರಿಸಿದೆ ಎಂದಿದ್ದಾರೆ.
ನಾನು ನನ್ನ ಜನರೊಂದಿಗೆ ಮಾತನಾಡಿ ನಡಿಗೆಯನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದೆ. ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಬಳಿಗೆ ಬಂದು, ನೀವು ನಿಜವಾಗಿಯೂ ಜನರ ಕಷ್ಟಗಳನ್ನು ಆಲಿಸಲು ಕೇಂದ್ರಾಡಳಿತ ಪ್ರದೇಶಕ್ಕೆ ಬಂದಿದ್ದಾರಾ ಎಂದು ಕೇಳಿದರು. ಸ್ವಲ್ಪ ಸಮಯದ ನಂತರ, ಆ ವ್ಯಕ್ತಿ ಹತ್ತಿರದ ಕೆಲವು ಜನರ ಕಡೆಗೆ ತೋರಿಸಿದನು ಮತ್ತು ಅವರೆಲ್ಲರೂ ಭಯೋತ್ಪಾದಕರು ಎಂದು ಬಹಿರಂಗಪಡಿಸಿದರು ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದರು.
“ಆ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ನನ್ನನ್ನು ಕೊಲ್ಲುವ ಕಾರಣ ನಾನು ತೊಂದರೆಯಲ್ಲಿದ್ದೇನೆ ಎಂದು ನಾನು ಭಾವಿಸಿದೆ. ಆದರೆ ಅವರು ಏನನ್ನೂ ಮಾಡಲಿಲ್ಲ ಏಕೆಂದರೆ ಇದು ‘ಕೇಳುವ ಶಕ್ತಿ” ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ ಅವರು ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ “ಆಲಿಸುವ ಕಲೆ” ಯ ವಿಚಾರದ ಮೇಲೆ ತಮ್ಮ ಉಪನ್ಯಾಸ ನೀಡಿದರು.