ಉಳ್ಳಾಲ: ಸಂಪತ್ತು ಇರುವ ಎಲ್ಲರೂ ಅದನ್ನು ದೇವ ಕಾರ್ಯ, ಧರ್ಮ ಕಾರ್ಯಕ್ಕೆ ನೀಡುವುದು ವಿರಳ. ದಾನ, ಧರ್ಮದಿಂದ ಬದುಕಿನಲ್ಲಿ ಸಾರ್ಥಕ್ಯ ಕಾಣಬಹುದು. ಒಂದು ಸಣ್ಣ ಪ್ರದೇಶದಲ್ಲಿ ಇಷ್ಟೊಂದು ಶಾಸ್ತ್ರ ಬದ್ಧ ದೇಗುಲ ನಿರ್ಮಿಸಿರುವುದು ಒಂದು ದೈವಿಕ ಪವಾಡವೇ ಸರಿ ಎಂದು ಮುಂಬಯಿಯ ಹೇರಂಭ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಕುಂಪಲ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೇರಳ ಶಿವಗಿರಿಯ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ, ನಿಪ್ಪಾಣಿ ಶ್ರೀ ಶಕ್ತಿ ಪೀಠದ ಶ್ರೀ ಅರುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಕ್ಷೇತ್ರದ ತಂತ್ರಿಗಳಾದ ಲೋಕೇಶ್ ತಂತ್ರಿ, ಗಂಗಾಧರ ಶಾಂತಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ| ಬೃಜೇಶ್ ಚೌಟ, ಉಳ್ಳಾಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಮೊಕ್ತೇಸರ ಸುರೇಶ್ ಭಟ್ನಗರ, ಉಳ್ಳಾಲ ನಗರಸಭಾ ಮಾಜಿ ಸದಸ್ಯ ಉಳ್ಳಾಲ ಗುತ್ತು ದಿನೇಶ್ ರೈ, ಅನ್ವಿತ್ ಎಲೆಕ್ಟ್ರಾನಿಕ್ಸ್‌ನ ಮಾಲಕ ಪ್ರಕಾಶ್, ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಹರೀಶ್ ಮುಂಡೋಳಿ, ಕೊಲ್ಯ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ, ಬಿಲ್ಲವ ಬ್ರಿಗೇಡ್‌ನ ಅವಿನಾಶ್ ಪೂಜಾರಿ, ರಂಗೋಲಿ ಫ್ಲವರ್ ಡೆಕೊರೇಟರ್ಸ್‌ನ ಭರತ್, ಕಿಚನ್ ವರ್ಲ್ ನ ಜಯಂತ್ ಕಾಪಿಕಾಡ್, ಹೊರೆಕಾಣಿಕೆ ಸಮಿತಿ ಸಂಚಾಲಕ ಪುರುಷೋತ್ತಮ ಗಟ್ಟಿ, ಕ್ಷೇತ್ರದ ಪ್ರಧಾನ ಅರ್ಚಕ ಭವಾನಿ ಶಂಕರ ಶಾಂತಿ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಮೀಳ ವಿಜಯ್, ಪ್ರಮುಖರಾದ ಮೋಹನ್ ಶೆಟ್ಟಿ ಕುಂಪಲ, ಗಣೇಶ್ ಕೆ.ಎನ್., ಪ್ರಶಾಂತ್ ಶೆಟ್ಟಿ ಚೇತನ ನಗರ, ಜಗದೀಶ್ ಆಚಾರ್ಯ, ಗಣೇಶ್ ಅಂಚನ್, ಪ್ರಹ್ಲಾದ್ ಕುಮಾರ್ ಇಂದಾಜೆ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು, ಪ್ರಧಾನ ಸಂಚಾಲಕ ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು.