Advertisement

ಸಲಗ ನಡೆದಿದ್ದೇ ದಾರಿ

01:18 PM Jun 15, 2019 | mahesh |

“ಪ್ರತಿಯೊಬ್ಬ ಕಲಾವಿದನೊಳಗೆ ಒಬ್ಬ ನಿರ್ದೇಶಕನಿರುತ್ತಾನೆ, ಪ್ರತಿಯೊಬ್ಬ ನಿರ್ದೇಶಕನೊಳಗೂ ಒಬ್ಬ ಕಲಾವಿದನಿರುತ್ತಾನೆ …’

Advertisement

-ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ “ದುನಿಯಾ’ ವಿಜಯ್‌ ಅವರ ಮುಖ ನೋಡಿದರು ಸುದೀಪ್‌. ಸುದೀಪ್‌ ಮಾತಿಗೆ ವಿಜಯ್‌ ಮುಗುಳ್ನಕ್ಕರು. ಹೀಗೆ ಇಬ್ಬರು ಹೀರೋಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿದ್ದು “ಸಲಗ’ ಚಿತ್ರ. ಈ ಚಿತ್ರದ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು. ಇದು ದುನಿಯಾ ವಿಜಯ್‌ ಹೊಸ ಕನಸು. ಚಿತ್ರರಂಗಕ್ಕೆ ಫೈಟರ್‌ ಆಗಿ ಬಂದು ನಟರಾಗಿ, ಆ್ಯಕ್ಷನ್‌ ಹೀರೋ ಆಗಿ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡ ವಿಜಯ್‌, ಈಗ ಸಿನಿಮಾದ ಮತ್ತೂಂದು ಮಗ್ಗುಲಿಗೆ ತೆರೆದುಕೊಂಡಿದ್ದಾರೆ. ಅದು ನಿರ್ದೇಶನ. “ಸಲಗ’ ಚಿತ್ರದ ಮೂಲಕ ವಿಜಯ್‌ ನಿರ್ದೇಶಕರಾಗುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭಕೋರಿದರು. ಜೊತೆಗೆ ಚಿತ್ರರಂಗಕ್ಕೆ ಫೈಟರ್‌ ಆಗಿ ಬಂದು ಇವತ್ತು ನಿರ್ದೇಶಕನಾಗುತ್ತಿರುವ ವಿಜಯ್‌ ಅವರ ಕನಸು, ಜಿಮ್‌ನಲ್ಲಿ ಬೆವರಿಳಿಸಿ ದೇಹವನ್ನು ಫಿಟ್‌ ಆಗಿ ಇಡುವಲ್ಲಿನ ಶ್ರಮದ ಬಗ್ಗೆಯೂ ಮಾತನಾಡಿದರು. ಜೊತೆಗೆ ಎರಡು ಸಾವಿರ ರೂಪಾಯಿಯನ್ನು ವಿಜಯ್‌ ಕೈಗಿಟ್ಟು, ಒಳ್ಳೆಯದಾಗಲಿ ಎಂದು ಹಾರೈಸಿದರು. ಮುಹೂರ್ತ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಸುರೇಶ್‌, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಅನೇಕರು ಬಂದು ಹಾರೈಸಿದರು.

“ಸಲಗ’ ಚಿತ್ರದ ಬಗ್ಗೆ ಮಾತನಾಡುವ ವಿಜಯ್‌, “ಇದು ನನ್ನ ಕನಸಿನ ಸಿನಿಮಾ. ಇದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ. ಇದು ಕಾಡಿನೊಳಗಿರುವ ಸಲಗವಲ್ಲ, ನಾಡಿನೊಳಗಿ­ರುವ ಸಲಗ. ಒಬ್ಬ ಅಮಾಯಕ ವ್ಯಕ್ತಿ ಭೂಗತಲೋಕದಲ್ಲಿ ಸಿಲುಕಿದಾಗ ನಡೆಯುವ ಕಥೆ. ಸಿನಿಮಾ ತುಂಬಾ ಅದ್ಧೂರಿಯಾಗಿ ಮೂಡಿಬರಲಿದೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದೇನೆ’ ಎಂದರು ವಿಜಯ್‌. ಜೊತೆಗೆ ಚಿತ್ರರಂಗದಲ್ಲಿ ತನಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸುದೀಪ್‌ ಅವರಿಗೂ ಥ್ಯಾಂಕ್ಸ್‌ ಹೇಳಿದರು.

“ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ವಿಲನ್‌ ಆಗಿ ಅಬ್ಬರಿಸಿದ್ದ ಧನಂಜಯ್‌ ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಮಿಂಚಲಿದ್ದಾರೆ. ಅವರು ಕೂಡಾ ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡಿ­ದರು. ಚಿತ್ರದಲ್ಲಿ ಸಂಜನಾ ಆನಂದ್‌ ನಾಯಕಿ. ಉಳಿದಂತೆ “ಟಗರು’ ಸರೋಜ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಟಗರು’ ಚಿತ್ರ ನಿರ್ಮಿ­ಸಿದ್ದ ಶ್ರೀಕಾಂತ್‌ ಈಗ “ಸಲಗ’ ಮೂಲಕ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next