Advertisement
ಕೋರಮಂಗಲದ ನ್ಯಾಯಾಧೀಶರ ಮನೆಯಿಂದ ವಿಜಯ್ ಸೇರಿದಂತೆ ನಾಲ್ವರು ಆರೋಪಿಗಳು ಭಾನುವಾರ ರಾತ್ರಿ 9-40ರ ಸುಮಾರಿಗೆ ಜೈಲಿಗೆ ಕರೆತರಲಾಯಿತು. ಬಳಿಕ ನಿಯಮಾವಳಿಗಳಂತೆ ಎಂಟ್ರಿ ನಮೂದಿಸಿ, ವೈದ್ಯಕೀಯ ತಪಾಸಣೆ ನಡೆಸಿ ವಶಕ್ಕೆ ಪಡೆದು ವಿಜಯ್ ಅವರನ್ನು ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಬ್ಯಾರಕ್ ಒಂದರಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಈ ಪ್ರಕರಣ ಸಂಬಂಧ ಹಲವು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ವಿಜಯ್‌ನನ್ನು ಕಳೆದ ಜೂನ್‌ನಲ್ಲಿ ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು ತಮಿಳುನಾಡು ಗಡಿಯ ರೆಸಾರ್ಟ್‌ನಿಂದ ಬಂಧಿಸಿ ಕರೆತಂದಿದ್ದರು. ಈ ಪ್ರಕರಣದಲ್ಲಿ ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಕಾರಣ ನ್ಯಾಯಾಂಗ ಬಂಧನ ಭೀತಿಯಿಂದ ಪಾರಾಗಿದ್ದರು. ಈ ಬೆನ್ನಲ್ಲೇ ನಿವೃತ್ತ ಯೋಧ ವೆಂಕಟೇಶ್ ಎಂಬುವವರು ಕೂಡ ದುನಿಯಾ ವಿಜಯ್ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ.
ವಿಜಯ್ ಭಾವಮೈದ ಕಿರಣ್‌ಗೆ 4 ಲಕ್ಷ. ರೂ. ಸಾಲ ನೀಡಿದ್ದು, ವಾಪಾಸ್ ನೀಡಿರಲಿಲ್ಲ. ಈ ವಿಚಾರವನ್ನು ತಿಳಿಸಲು ವಿಜಯ್ ಮನೆಯ ಹತ್ತಿರ ಹೋಗಿದ್ದಾಗ, ಮತ್ತೂಮ್ಮೆ ಮನೆಯ ಹತ್ತಿರ ಬಂದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನಿಂದಿಸಿ ಪ್ರಾಣಬೆದರಿಕೆ ಒಡ್ಡಿದ್ದರು ಎಂದು ವೆಂಕಟೇಶ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಪ್ರಕರಣದ ಟೈಮ್ ಲೈನ್ * ಶನಿವಾರ ರಾತ್ರಿ 10: ಮಾರುತಿಗೌಡನ ಜತೆ ಜಗಳ
* ರಾತ್ರಿ 10.30: ಮಾರುತಿ ಗೌಡನ ಅಪಹರಣ ಹಲ್ಲೆ
* ರಾತ್ರಿ 11:30: ಹೈಗ್ರೌಂಡ್ಸ್ ಪೊಲೀಸರಿಂದ ವಿಜಯ್ ಸೇರಿ ಆರೋಪಿಗಳ ಬಂಧನ
* ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವೈಯಾಲಿಕಾವಲ್ ಆಸ್ಪತ್ರೆಗೆ ಸ್ಥಳಾಂತರ
* ರಾತ್ರಿ: 9 ಗಂಟೆ – ನ್ಯಾಯಾಧೀಶರಿಂದ 14 ದಿನಗಳ ನ್ಯಾಯಾಂಗ ಬಂಧನ ಆದೇಶ
* ರಾತ್ರಿ 9:40 – ಪರಪ್ಪನ ಅಗ್ರಹಾರ ಜೈಲಿಗೆ