ನಾವು ದಿನನಿತ್ಯ ಟಿ.ವಿ.ಗಳಲ್ಲಿ ನೋಡುವ ಜ್ಯೋತಿಷ್ಯ ಕಾರ್ಯಕ್ರಮವನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿರುವ ನಾಟಕ “ಪುಕ್ಕಟ ಸಲಹೆ’. ಶ್ರೀಶ್ರೀಶ್ರೀ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ಗಳು ನಾಡಿನ ವಿವಿಧ ಭಾಗಗಳಿಂದ ಕರೆಮಾಡಿ ತಮ್ಮ ವಿಚಿತ್ರ ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರಿಗೆ ಕೊಡುವ ಉಚಿತ ಸಲಹೆಗಳು ನೋಡುಗರನ್ನು ಬಿದ್ದುಬಿದ್ದು ನಗುವಂತೆ ಮಾಡುತ್ತದೆ. ನಡುನಡುವೆ ಬರುವ ಹಾಸ್ಯ ಜಾಹೀರಾತುಗಳು ನಾಟಕಕ್ಕೆ ಮತ್ತಷ್ಟು ಮೆರುಗು ತರುತ್ತವೆ. ಎಚ್. ಡುಂಡಿರಾಜ್ ಅವರು ರಚಿಸಿರುವ ಈ ನಾಟಕದ ನಿರ್ದೇಶಕರು ಅಶೋಕ್ ಬಿ. ವಿಶ್ವಪಥ ಕಲಾಸಂಗಮದ ಹವ್ಯಾಸಿ ರಂಗತಂಡವು ಈ ನಾಟಕವನ್ನು ಪ್ರದರ್ಶಿಸುತ್ತಿದೆ.
ಯಾವಾಗ?: ಸೆ.2, ಭಾನುವಾರ, ಸಂ.4
ಎಲ್ಲಿ?: ಕೆ.ಎಚ್. ಕಲಾಸೌಧ, ಹನುಮಂತನಗರ