Advertisement

ಮುಂದುವರಿದ ಹಸಿಕಸ ವಿಲೇವಾರಿ ಸಮಸ್ಯೆ

06:00 AM Sep 28, 2018 | |

ಕೋಟ: ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಕಳೆದ ಎರಡೂವರೆ ವರ್ಷದಿಂದ ತ್ಯಾಜ್ಯ ಸಂಗ್ರಹಣೆ ನಡೆಸುತ್ತಿದ್ದು  ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಸೆ. 24 ರಂದು  ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆಗೆ ಮಣಿದ ಪ.ಪಂ. ಇಲ್ಲಿ  ಸಂಗ್ರಹಿದ ಕಸವನ್ನು ಟಿಪ್ಪರ್‌ ಮೂಲಕ ಕಂದಾವರದ ಡಂಪಿಂಗ್‌ಯಾರ್ಡ್‌ಗೆ ಸಾಗಿಸಿ ಮೈದಾನವನ್ನು ಸ್ವಚ್ಚಗೊಳಿಸಿದೆ.

Advertisement

ರಾಷ್ಟ್ರ ಮಟ್ಟದ ಕ್ರಿಕೆಟ್‌ ಪಂದ್ಯಾಟದ ಮೂಲಕ ಗಮನಸೆಳೆದಿದ್ದ ಈ  ಕ್ರೀಡಾಂಗಣ  ತ್ಯಾಜ್ಯ ಶೇಖರಣೆಯ ತೊಟ್ಟಿಯಾಗಿ ಮಾರ್ಪಟ್ಟಿತ್ತು. ತ್ಯಾಜ್ಯ ಶೇಖರಣೆ ಘಟಕದ  ಪಕ್ಕದಲ್ಲಿ 16 ಲ.ರೂ.  ವೆಚ್ಚದಲ್ಲಿ  ನವೀಕರಿಸಿದ ಕುಡಿಯುವ ನೀರಿನ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿತ್ತು. ಹೀಗಾಗಿ ತ್ಯಾಜ್ಯ ಸಂಗ್ರಹ ಕೈಬಿಡಬೇಕು ಎಂದು ಒತ್ತಾಯಿಸಿದ್ದರು.

ಸುತ್ತ ಬೇಲಿ
ಹೊರಗಿನಿಂದ  ಖಾಸಗಿಯವರು  ತ್ಯಾಜ್ಯವನ್ನು ತಂದು ಡಂಪ್‌ ಮಾಡದಂತೆ ತಡೆಯುವ ಸಲುವಾಗಿ ಇದೀಗ  ಕ್ರೀಡಾಂಗಣದೊಳಗೆ ಯಾವುದೇ ವಾಹನ ಗಳು ಬರದಂತೆ ಬೇಲಿ ಅಳವಡಿಸಲಾಗಿದೆ ಹಾಗೂ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿದೆ.

ಹಸಿಕಸ ವಿಲೇವಾರಿಗೆ ಸಮಸ್ಯೆ
ಡಂಪಿಂಗ್‌ಯಾರ್ಡ್‌ ಸಮಸ್ಯೆಯಿಂದ ವಾರದಲ್ಲಿ ಒಂದು ದಿನ ಮಾತ್ರ ಒಣಕಸವನ್ನು  ಪ.ಪಂ. ಸ್ವೀಕರಿಸುತ್ತಿದೆ.  ಹೀಗಾಗಿ ಹೊಟೇಲ್‌ಗ‌ಳು, ಕೈಗಾರಿಕೆ, ತರಕಾರಿ ಅಂಗಡಿ, ವಾಣಿಜ್ಯ ಸಂಕೀರ್ಣದ  ಹಸಿ ಕಸ ವಿಲೇವಾರಿಗೆ ಸಮಸ್ಯೆಯಾಗುತ್ತಿದ್ದು. ಮುಖ್ಯ ರಸ್ತೆಗಳ ಅಕ್ಕ-ಪಕ್ಕದಲ್ಲಿ ಹಾಗೂ ಬೆಟ್ಲಕ್ಕಿ ಹಡೋಲು ಮುಂತಾದ ಕಡೆ ಸಾರ್ವಜನಿಕ ಸ್ಥಳದಲ್ಲಿ ಈ  ಕಸವನ್ನು ಅಕ್ರಮವಾಗಿ ಎಸೆಯುವ ಆತಂಕ ಎದುರಾಗಿದೆ.ಒಟ್ಟಾರೆ ಶಾಶ್ವತ ಡಂಪಿಂಗ್‌ಯಾರ್ಡ್‌ ನಿರ್ಮಾಣಗೊಳ್ಳುವ ವರೆಗೆ ಈ ಸಮಸ್ಯೆ ಮುಂದುವರಿಯಲಿದೆ.

ಕಾಂಪೋಸ್ಟ್‌ ತರಬೇತಿ
ಐಇಸಿ ಕಾರ್ಯಕ್ರಮದಂತೆ ಪೈಪ್‌ ಕಾಂಪೋಸ್ಟ್‌, ಪಿಟ್‌ ಕಾಂಪೋಸ್ಟ್‌, ಬಯೋ ಬಿನ್ಸ್‌ ಅಥವಾ ಇನ್ನಿತರ ವಿಧಾನ ಗಳಿಂದ ತಮ್ಮ ಸ್ವಂತ ಸ್ಥಳದಲ್ಲಿಯೇ  ಹಸಿಕಸವನ್ನು ವಿಲೀನಗೊಳಿಸುವ ಕುರಿತು ಹೊಟೇಲ್‌, ಕೈಗಾರಿಕೆ, ತರಕಾರಿ ಅಂಗಡಿ, ವಾಣಿಜ್ಯ ಸಂಕೀರ್ಣದ ಮಾಲಕರಿಗೆ ತರಬೇತಿ ನೀಡುವ ಸಲುವಾಗಿ ಅ.3ರಂದು ಪ.ಪಂ. ವತಿಯಿಂದ ತರಬೇತಿ ಶಿಬಿರ ಆಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next