Advertisement
ಮಳೆಗಾಲದ ಪೂರ್ವ ಭಾವಿಯಾಗಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ವಾಗುವ ನಿಟ್ಟಿನಲ್ಲಿ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ನಗರದ ವಿವಿಧ ಕಡೆಗಳಲ್ಲಿ ಭರದಿಂದ ಸಾಗುತ್ತಿದೆ. ಜತೆಗೆ ಸಣ್ಣ ಪುಟ್ಟ ಚರಂಡಿ, ತೋಡಿನ ಹೂಳು ಕೂಡ ಅಲ್ಲಲ್ಲಿ ತೆಗೆಯಲಾಗುತ್ತಿದೆ. ಆದರೆ ತೆಗೆದ ಹೂಳನ್ನು ಕೆಲವು ಕಡೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂಬುದು ಸದ್ಯ ಎದುರಾದ ಆರೋಪ.
Related Articles
Advertisement
ರಾಜಕಾಲುವೆಗೆ ತಡೆಗೋಡೆ ಭದ್ರತೆ
ನಗರದ ವಿವಿಧ ಕಡೆಗಳಲ್ಲಿ ರಾಜಕಾಲು ವೆಯ ಬದಿಯ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ. ಇದು ಈ ಮಳೆಗಾಲದ ಮುನ್ನ ಪೂರ್ಣಗೊಂಡರೆ ನಗರದ ವಿವಿಧ ಕಡೆಗಳ ನೆರೆ ನೀರಿನ ಸಮಸ್ಯೆ ಪರಿಹಾರವಾಗಬಹುದು.
ವಿಲೇವಾರಿಗೆ ಕ್ರಮ
ನಗರದ ಬಹುತೇಕ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ಈಗಾಗಲೇ ನಡೆದಿದ್ದು, ಉಳಿದ ಕಡೆಯಲ್ಲಿ ಕಾಮಗಾರಿ ಈಗಲೂ ನಡೆಯುತ್ತಿದೆ. ಆದರೆ ತೆಗೆದ ಹೂಳಿನ ನೀರಿನ ಅಂಶ, ವಾಸನೆ ಹೋಗಲಿ ಎಂಬ ಕಾರಣಕ್ಕೆ ಒಂದೆರಡು ದಿನ ಹಾಗೆಯೇ ಇಟ್ಟಿರುತ್ತಾರೆ. ಬಳಿಕ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ತೋಡಿನ ಬದಿಯ ಹೂಳು ತೆಗೆಯದಿದ್ದರೆ ಅದರ ವಿಲೇವಾರಿಗೆ ಸೂಚಿಸಲಾಗುವುದು. –ಪ್ರೇಮಾನಂದ ಶೆಟ್ಟಿ, ಮೇಯರ್, ಮಹಾನಗರ ಪಾಲಿಕೆ