Advertisement

ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್  

10:14 PM May 27, 2021 | Team Udayavani |

ಮುಂಬೈ : ಮಾಲಿವುಡ್ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಇದೀಗ ಮತ್ತೆ ಬಿಟೌನ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ.  ಬಾಲಿವುಡ್ ನಲ್ಲಿ ತಮ್ಮ ಮೂರನೇ ಚಿತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ.

Advertisement

ಸೌಥ್ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ಸಲ್ಮಾನ್, 2018ರಲ್ಲಿ ನಟ ಇರ್ಫಾನ್, ಮಿಥಿಲಾ ಪಾಲ್ಕರ್ ಜೊತೆ ‘ಕಾರ್ವಾನ್’ ಸಿನಿಮಾದಲ್ಲಿ ನಟಿಸಿದ್ದರು.  2019 ರಲ್ಲಿ ಸೋನಮ್ ಕಪೂರ್ ಜೊತೆ ‘ಜೋಯಾ ಫ್ಯಾಕ್ಟರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಾಲಿವುಡ್ ಯಶಸ್ವಿ ನಿರ್ದೇಶಕ ಆರ್ ಬಲ್ಕಿ ಜೊತೆ ಹೊಸ ಚಿತ್ರಕ್ಕೆ ಕೈ ಜೋಡಿಸಿದ್ದಾರೆ.

ಇನ್ನೂ ಹೆಸರಿಡದ ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರಕ್ಕೆ ಬಲ್ಕಿ ನಿರ್ದೇಶನ ಮಾಡಲಿದ್ದಾರೆ. ಛಾಯಾಗ್ರಾಹಕ ಶ್ರೀರಾಮ್, ಕ್ಯಾಮರಾ ವರ್ಕ್ ಮಾಡಲಿದ್ದಾರೆ. ಇನ್ನುಳಿಂದತೆ ಸ್ಟಾರ್ ಕಾಸ್ಟ್ ಸೇರಿದಂತೆ ತಾರಾಬಳಗದ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಕೋವಿಡ್ ಸೋಂಕು ತೊಲಗಿದ ಬಳಿಕ ಮುಂಬೈ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ದುಲ್ಕರ್ ಸಲ್ಮಾನ್ ಮಲಯಾಲಂ, ತೆಲುಗು ಹಾಗೂ ತಮಿಳು ಸಿನಿರಂಗದ ಚಿರಪರಿಚಿತ ನಟ. ಸದ್ಯ ಅವರು ಮಲಯಾಳಂ ಭಾಷೆಯಲ್ಲಿ ‘ಕುರುಪ್’, ‘ಸಲ್ಯೂಟ್’ ಹಾಗೂ ತಮಿಳಿನಲ್ಲಿ ‘ಹೇ ಸಿನಾಮಿಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲೂ ಒಂದು ಪ್ರಾಜೆಕ್ಟ್ ಆರಂಭಿಸಿದ್ದಾರೆ. ಇವುಗಳ ಜೊತೆ ಮತ್ತೊಂದು ಬಾರಿ ಹಿಂದಿ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next